*ಪ್ರಾಣವನ್ನೆ ಲೆಕ್ಕಿಸದೆ ಜೆಸಿಬಿ ಏರಿ ದಡ ಸೇರಿದ ಶಾಲಾ ಮಕ್ಕಳು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಸೇತುವೆ ಅಪಯ ಮಟ್ಟ ಮೀರಿ ಹರಿಯುತ್ತಿದ್ದು, ಶಾಲೆಗೆ ಹೋದ ಮಕ್ಕಳು ಸಾವನ್ನು ಲೆಕ್ಕಿಸದೆ ಜೆಸಿಬಿ ಏರಿ ಬಂದು ದಡ ಸೇರಿದ ಘಟನೆ ಗೋಕಾಕ್ ತಾಲ್ಲೂಕಿನ ಉಪ್ಪರಟ್ಟಿ ಗ್ರಾಮದಲ್ಲಿ ನಡೆದಿದೆ.
ಸುಮಾರು 50 ವರ್ಷಗಳ ಹಳೆಯದಾಗಿರುವ ಉಪ್ಪರಟ್ಟಿ ಮಾಲದಿನ್ನಿ ನಡುವೆ ಇರುವ ಸೇತುವೆ ಮಳೆ ಬಂದರೆ ಸಾಕು ಸೇತುವೆ ಮೇಲೆ ನೀರು ಬಂದು ಉಪ್ಪರಟ್ಟಿ ಮತ್ತು ಮಾಲದಿನ್ನಿ ಗ್ರಾಮಸ್ಥರ ಗೋಳು ಅಷ್ಟಿಷ್ಟಲ್ಲ, ಇತ್ತ ಶಾಲೆ ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಕೂಲಿ ಕಾರ್ಮಿಕರು ದುಡಿಯಲಿಕ್ಕೆ ಹೋಗುವ ಪರಿಸ್ಥಿತಿ ಇರೋದಿಲ್ಲ. ಸೇತುವೆ 50 ವರ್ಷಗಳಾಗಿದ್ದರು ಸಹ ದಿನಾಲು ಇದೇ ಸೇತುವೆ ಮೇಲೆ ತಿರುಗಾಡುವ ಲೋಕೋಪಯೋಗಿ ಅಧಿಕಾರಿಗಳು ಗ್ರಾಮ ಪಂಚಾಯತ್ ಪಿಡಿಓ, ಸದಸ್ಯರಿಗೆ ಇದು ಗಮನಕ್ಕೆ ಬಂದಿಲಾನೋ ಅಥವಾ ನಮಗ್ಯಾಕೆ ಊರ ಉಸಾಬರಿ ಅಂತಾನೋ ಅನುತಿದ್ದಾರೋ ತಿಳಿಯದಂತಾಗಿದೆ.
ಮಕ್ಕಳ ಅದೃಷ್ಟ ಚೆನ್ನಾಗಿದೆ. ಜೆಸಿಬಿಯಲ್ಲಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ, ಮುಂದೆ ಯಾವುದೇ ಅನಾಹುತ ಆಗದಂತೆ ತಡೆಯಬೇಕಾದರೆ ಇನ್ನಾದರೂ ತಕ್ಷಣ ಹೊಸದಾಗಿ ಸೇತುವೆ ನಿರ್ಮಿಸಿ ಶಾಲಾ ಮಕ್ಕಳಿಗೆ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುತ್ತಾರೆಯೇ ಕಾದು ನೋಡಬೇಕಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ