ಮಂಗಳವಾರದಿಂದ ಶಾಲೆಗಳು ಪುನಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಭಾರಿ ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಒಂದು ವಾರದಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದೀಗ ಮಳೆ ನಿಂತಿರುವುದರಿಂದ ಮಂಗಳವಾರದಿಂದ ಶಾಲೆಗಳು ಪುನಾರಂಭವಾಗಲಿವೆ.
ಬೆಳಗಾವಿ ಜಿಲ್ಲೆಯಾದ್ಯಂತ ಆ.13ರಿಂದ ಶಾಲೆಗಳನ್ನು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಳ್ಳಿ ಆದೇಶಿಸಿದ್ದಾರೆ.
ಪ್ರವಾಹಪೀಡಿತ 17 ಜಿಲ್ಲೆಗಳಲ್ಲಿ ಶಾಲೆಗಳಿಗೆ ಆ.15ರ ವರೆಗೂ ರಜೆ ನೀಡಲಾಗಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಇದೀಗ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಬಕ್ರಿದ್ ಹಿನ್ನೆಲೆಯಲ್ಲಿ ರಜೆ ಇದೆ.
ಮುನ್ನೆಚ್ಚರಿಕೆ ಅಗತ್ಯ
ಶಾಲೆಗಳನ್ನು ಪುನಾರಂಭಿಸುವುದು ಜಿಲ್ಲೆಯ ಬಹುತೇಕ ಕಡೆ ಕಷ್ಟಸಾಧ್ಯ. ಎಷ್ಟೋ ಶಾಲೆಗಳು ಪ್ರವಾದಲ್ಲಿ ಮುಳುಗಿಹೋಗಿವೆ. ಅನೇಕ ಶಾಲೆಗಳು ಇನ್ನು ಜಲಾವೃತವಾಗಿವೆ. ಅನೇಕ ಕಡೆ ನೀರು ನುಗ್ಗಿದ್ದರಿಂದ ಶಾಲೆಗಳ ಸ್ಥಿತಿ ಮಕ್ಕಳು ಪಾಠ ಕೇಳುವಂತಿಲ್ಲ. ಅನೇಕ ಶಾಲೆಗಳಿಗೆ ನೀರು ನುಗ್ಗಿದ್ದರಿಂದ ದಾಖಲೆಗಳು ನಾಶವಾಗಿರಬಹುದು. ಕಂಪ್ಯೂಟರ್ ಗಳು ಹಾಳಾಗಿರಬಹುದು.
ಇನ್ನು ಅನೇಕ ಕಡೆ ಶಾಲೆಗಳು ಮುಳುಗಿದ್ದರಿಂದ ಗೋಡೆಗಳು ಶಿಥಿಲವಾಗಿವೆ. ಅಂತಹ ಪ್ರದೇಶದಲ್ಲಿ ಮಕ್ಕಳನ್ನು ಕೂಡ್ರಿಸುವುದು ಅಪಾಯಕಾರಿ. ಹಾಗಾಗಿ ಶಾಲೆಗಳ ಸ್ಥಿತಿಗತಿಗಳನ್ನು ಅವಲೋಕಿಸಿ ಮಕ್ಕಳನ್ನು ಕೂಡ್ರಿಸಬೇಕಾದ ಅಗತ್ಯವಿದೆ. ಪರಿಶೀಲನೆಯವರೆಗೆ ಬೇರೆ ಯಾವುದಾದರೂ ಸ್ಥಳದಲ್ಲಿ ಪಾಠಕ್ಕೆ ವ್ಯವಸ್ಥೆ ಮಾಡುವುದೊಳಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ