ಗಣೇಶೋತ್ಸವ, ಮೊಹರಂ ಸಂದರ್ಭದಲ್ಲಿ ಬಂದೋಬಸ್ತ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ನಗರದಲ್ಲಿ ದಿನಾಂಕ ೦೨.೦೯.೨೦೧೯ ರಿಂದ ೧೨.೦೯.೨೦೧೯ ರವರೆಗೆ ಶ್ರೀ ಗಣೇಶ ಉತ್ಸವ ನಡೆಯಲಿದೆ. ಈ ಅವಧಿಯಲ್ಲಿ ದಿನಾಂಕ ೧೦.೦೯.೨೦೧೯ ರಂದು ಮೊಹರಂ ಹಬ್ಬ ಸಹ ನಡೆಯಲಿದೆ.
ಈ ಸಂದರ್ಭದಲ್ಲಿ ಏರ್ಪಡಿಸಲಾಗಿರುವ ಬಂದೋಬಸ್ತ್ ಕುರಿತು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಹಾಗೂ ಡಿಸಿಪಿಗಳಾದ ಸೀಮಾ ಲಾಟ್ಕರ್ ಹಾಗೂ ಯಶೋಧಾ ವಂಟಗೂಡಿ ಪತ್ರಕರ್ತರಿಗೆ ಮಾಹಿತಿ ನೀಡಿದರು. ಅದರ ಪೂರ್ಣ ವಿವರ ಹೀಗಿದೆ –
ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು ೧೦೭೨ ಗಣೇಶ ಮೂರ್ತಿಗಳು ಪ್ರತಿಷ್ಠಾಪಣೆ ಆಗಲಿವೆ. ಅದೇ ರೀತಿ ದಿನಾಂಕ ೦೫.೦೯.೨೦೧೯ ರಂದು ಮೊಹರಂ ಹಬ್ಬದ ನಿಮಿತ್ಯ ೧೦೩-ಪಂಜಾಗಳು, ೧೩-ತಾಬೂತುಗಳು ಪ್ರತಿಷ್ಠಾಪನೆ ಆಗಲಿದ್ದು, ದಿನಾಂಕ ೧೦.೦೯.೨೦೧೯ ರಂದು ವಿರ್ಸಜನೆಗೊಳ್ಳಲಿವೆ.
ಈ ನಿಟ್ಟಿನಲ್ಲಿ ಬೆಳಗಾವಿ ನಗರ ಹಾಗೂ ತಾಲೂಕಿನಾದ್ಯಾಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
೦೫-ಸಿಎಆರ್ ಪ್ರಹಾರ ದಳ, ೦೯ ಕೆ.ಎಸ್.ಆರ್.ಪಿ ಪ್ರಹಾರ ದಳಗಳು, ೦೧ ಕೇಂದ್ರ ಮೀಸಲು ಪಡೆ ಸೇರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್ ಕರ್ತವ್ಯದಲ್ಲಿ ನಿಯೋಜನೆಗೊಂಡಿದೆ.
ಬೆಳಗಾವಿ ನಗರದಲ್ಲಿ ಬಂದೋಬಸ್ತ್ ವೇಳೆ ಆಯಕಟ್ಟಿನ ಪ್ರದೇಶ ಸೂಕ್ಷ್ಮ ಸ್ಥಳಗಳು, ಮೆರವಣೆಗೆ ಮಾರ್ಗದುದ್ದಕ್ಕೂ ಹಾಗೂ ಪ್ರಾರ್ಥನಾ ಸ್ಥಳಗಳ ಹತ್ತಿರ ಮತ್ತು ಜನದಟ್ಟನೆ ಸ್ಥಳಗಳಲ್ಲಿ ಕಿಡಿಗೇಡಿಗಳ ಮೇಲೆ ಹಾಗೂ ಸಮಾಜ ಘಾತುಕರ ಮೇಲೆ ಕಣ್ಗಾವಲು ಇಡಲು ನಗರಾದ್ಯಂತ ಈಗಾಗಲೇ ೧೫೨ ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಿದ್ದು ಹೆಚ್ಚುವರಿಯಾಗಿ ಮೆರವಣೆಗೆ ಸಂದರ್ಭದಲ್ಲಿ ೨೫೮ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು.
ಇವುಗಳನ್ನು ಸಹ ವೀಕ್ಷಿಸಿ ಮೇಲ್ವಿಚಾರಣೆ ಮಾಡಲು ಸಹಿತ ಒಂದು ವಿಶೇಷ ತಂಡವನ್ನು ರಚಿಸಲಾಗಿದೆ.
ಇದಲ್ಲದೇ ನಗರದಲ್ಲಿ ೨೪ x ೭ ರೀತಿಯಲ್ಲಿ ಒಟ್ಟು ೨೦ ಶಕ್ತಿ ಮೋಟಾರು ಸೈಕಲ್‌ಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ, ೧೮ ರಕ್ಷಕ ವಾಹನಗಳು, ೦೨ ಹೈವೆ ಪೆಟ್ರೋಲಿಂಗ್ ವಾಹನಗಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತವೆ.
ಗಣೇಶ ಉತ್ಸವ ಮತ್ತು ಮೊಹರಂ ಹಬ್ಬದ ವೇಳೆಯಲ್ಲಿ ಬೆಳಗಾವಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಮಾಜ ಬಾಹೀರ ಕೃತ್ಯಗಳನ್ನು ನಡೆಸುವ ಮತ್ತು ಗೂಂಡಾ ಮತ್ತು ರೌಡಿ ಪ್ರವೃತ್ತಿಯ ಜನರ ವಿರುದ್ಧ ಈಗಾಗಲೇ ಮುಂಜಾಗ್ರತಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಕೊಳ್ಳುವ ವ್ಯವಸ್ಥೆ ಇಡಲಾಗಿದೆ.
ಇತರೇ ಇಲಾಖೆಗಳಾದ ಮಹಾನಗರ ಪಾಲಿಕೆ ಮತ್ತು ಹೆಸ್ಕಾಂ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಿ, ಗಣೇಶ ಉತ್ಸವದ ಕಾಲದಲ್ಲಿ ಯಾವುದೇ ಕುಂದುಕೊರತೆಗಳು ಉಂಟಾಗದಂತೆ ಸಮರ್ಪಕ ವ್ಯವಸ್ಥೆ ಮಾಡಲು ಹಾಗೂ ಮೆರವಣೆಗೆ ಮಾರ್ಗದಲ್ಲಿ ಹಾಗೂ ಬೈಲೆನ್ ಗಳಲ್ಲಿ ಪ್ರಖರವಾದ ವಿದ್ಯುತ್ ಅಳವಡಿಸಲು ಕೋರಲಾಗಿದೆ.
ದಿನಾಂಕ ೦೨.೦೯.೨೦೧೯ ರಂದು ಬೆಳಿಗ್ಗೆ ೦೬೦೦ ಗಂಟೆಯಿಂದ ದಿನಾಂಕ ೦೩.೦೯.೨೦೧೯ ರಂದು ೦೬೦೦ ಗಂಟೆಯವರೆಗೆ ಬೆಳಗಾವಿ ನಗರ ಹಾಗೂ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಬಂದೋಬಸ್ತ್ ವಿವರ ಹೀಗಿದೆ –
1 ನೇ ಹಂತ
Unit | COP | DCP/SP | ACP/DSP | CPI | PSI | ASI | HC/PC | HG |
Belagavi City | 01 | 02 | 05 | 20 | 12 | 60 | 600 | 250 |
Out Side COP | 0 | 0 | 0 | 0 | 0 | 0 | 380 | 200 |
Total | 1 | 2 | 5 | 20 | 12 | 60 | 980 | 450 |
2 ನೇ ಹಂತ
Unit | COP | DCP/SP | ACP/DSP | CPI | PSI | ASI | HC/PC | HG |
Belagavi City | 01 | 02 | 05 | 20 | 12 | 60 | 600 | 250 |
Out Side COP | 0 | 02 | 15 | 47 | 327 | 0 | 2198 | 200 |
Total | 1 | 4 | 20 | 67 | 339 | 60 | 2798 | 450 |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ