Kannada NewsKarnataka NewsLatest

ಈ ಜಗತ್ತಿನಲ್ಲಿ ಎಂತೆಂತಹ ಕರುಣಾಜನಕ ಕಥೆಗಳಿವೆ ನೋಡಿ, ನೋಡಿ ಸುಮ್ಮನಿರಬೇಡಿ…

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ಜಗತ್ತಿನಲ್ಲಿ ಎಂತೆಂತಹ ಕರುಣಾಜನಕ ಕಥೆಗಳಿವೆ ನೋಡಿ. ಈ ದೃಷ್ಯ ನೋಡಿದರೆ ನಿಮ್ಮ ಕರುಳು ಕಿತ್ತುಬರುತ್ತದೆ.

ಇಲ್ಲಿರುವ ಮಹಿಳೆ ಅಶ್ವಿನಿ. ಬೆಳಗಾವಿ ಸಮೀಪದ ಮಚ್ಛೆ ಗ್ರಾಮದ ವಿಜಯ ಗಲ್ಲಿಯ ನಿವಾಸಿ. ಈಕೆಗೆ ಮೂವರು ಮಕ್ಕಳು. ಮಗಳಿಗೆ ಮದುವೆಯಾಗಿದೆ. ಕಿರಿಯ ಮಗನಿಗೆ ಈಗ 18 ವರ್ಷ. ಆತ ಎಸ್ಎಸ್ಎಲ್ ಸಿ ವರೆಗೆ ಓದಿದ್ದು, ಮುಂದೆ ಓದಲು ಆರ್ಥಿಕ ಕಾರಣದಿಂದಾಗಿ ಸಾಧ್ಯವಾಗಿಲ್ಲ.

ಚಿತ್ರದಲ್ಲಿ ಕಾಣುವ ಹಿರಿಯ ಮಗ ಶುಭಂಗೆ 24 ವರ್ಷ. ಆದರೆ ಸಂಪೂರ್ಣ ವಿಕಲಚೇತನ. ದೇಹದ ಯಾವ ಅಂಗಾಂಗಗಳೂ ಕೆಲಸ ಮಾಡದ ಸ್ಥಿತಿ. ಹಾಸಿಗೆಯಲ್ಲೇ ಬಂಧಿ.

ಅಶ್ವಿನಿಯ ಪತಿ 12 ವರ್ಷದ ಹಿಂದೆ ಕಿಡ್ನಿ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ. ನಂತರ ಅಶ್ವಿನಿ ತಂದೆಯ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ 2 ವರ್ಷದ ಹಿಂದೆ ತಂದೆಯೂ ಅಗಲಿದ್ದಾರೆ. ಈಗ ಆಕೆ ಹೊಲಿಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಳು. ಆದರೆ ಲಾಕ್ ಡೌನ್ ಆದ ನಂತರದಲ್ಲಿ ಆಕೆಗೆ ಹೊಲಿಗೆ ಕೆಲಸವೂ ಬರುತ್ತಿಲ್ಲ. ಹಾಸಿಗೆಯಲ್ಲಿರುವ ಮಗನೊಂದಿಗೆ ಕುಳಿತು ಕಣ್ಣೀರು ಹಾಕುವುದೊಂದೇ ದಾರಿಯಾಗಿದೆ.

Home add -Advt

ಶುಭಂ ಗೆ ಸರಕಾರದಿಂದ ಪ್ರತಿ ತಿಂಗಳು ವಿಕಲಚೇತನ ಭತ್ಯೆ 1,200 ರೂ. ಬರುತ್ತದೆ. ಆದರೆ ಆತನ ಔಷಧ, ಮನೆಯ ಗ್ಯಾಸ್ ಬಿಲ್, ವಿದ್ಯುತ್ ಬಿಲ್, ದಿನದ ಖರ್ಚುಗಳಿಗೆ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಅಶ್ವಿನಿ ಪ್ರಗತಿವಾಹಿನಿಗೆ ತಿಳಿಸಿದರು.

ಈ ತಾಯಿಗೆ ಸಹಾಯ ಮಾಡುವವರು ಈ ನಂಬರ್ ಸಂಪರ್ಕಿಸಬಹುದು – 08431214718.

(ಸಹಾಯ ಮಾಡಿದವರು ಪ್ರಗತಿವಾಹಿನಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿ – 8197712235 )

Related Articles

Back to top button