ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ಪಟ್ಟಣದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್ ಜಿ ಎಸ್ ವಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ಎನ್ ಸಿ ಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಅಭಿಷೇಕ ಹಂಚಿನಮನಿ ಈತನು ಜ. 26 ರಂದು ದೆಹಲಿ ಕರ್ತವ್ಯಪಥದಲ್ಲಿ ಜರಗುವ 76 ನೇ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಕರ್ನಾಟಕ ಎನ್ ಸಿ ಸಿ ಘಟಕದ ವತಿಯಿಂದ ಭಾಗವಹಿಸಲಿದ್ದಾನೆ.
ವಿದ್ಯಾರ್ಥಿಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭು ನೀಲಕಂಠ ಸ್ವಾಮೀಜಿ, ಕರ್ನಾಟಕ 25 ನೇ ಬಟಾಲಿಯನ್ ಕಮಾಡಿಂಗ ಆಫಿಸರ್ ಕರ್ನಲ್ ಸುಭಾನು ದೀಕ್ಷಿತ್, ಪ್ರಾಚಾರ್ಯ ಎನ್ ಎಸ್ ಚೀಲಮೂರ, ಎನ್ ಸಿ ಸಿ ಅಧಿಕಾರಿ ಮೇಜರ್ ಎಂ ಸಿ ಹೇಮಗಿರಿಮಠ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ