Latest

ಅಡುಗೆಯವಳೊಂದಿಗೆ ಸೆಲ್ಫಿ: ಶಿಕ್ಷಕ ಅಮಾನತು

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ – ಅಡುಗೆ ಸಹಾಯಕಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡುತ್ತಿದ್ದ ಶಿಕ್ಷಕನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಆಂಜನೇಯ ನಾಯ್ಕ ಅಮಾನತುಗೊಂಡವ. ಲಾಕ್ ಡೌನ್ ಸಂದರ್ಭದಲ್ಲಿ ಶಾಲೆಗಳು ಬಂದ್ ಆಗಿದ್ದರೂ ಶಾಲೆಗೆ ಬರುತ್ತಿದ್ದ ಶಿಕ್ಷಕ, ಅಡುಗೆಯವರನ್ನೂ ಕರೆಸುತ್ತಿದ್ದ. ಅಡುಗೆ  ಸಹಾಯಕಿಯೊಬ್ಬಳೊಂದಿಗೆ ಮಾಡಬಾರದ ವರ್ತನೆ ಮಾಡುತ್ತಿದ್ದ. ಜೊತೆಗೆ ಅವಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಮಕ್ಕಳಿಂದ ಗುಟಕಾ ತರಿಸುತ್ತಿದ್ದ, ಕುಡಿದು ಬರುತ್ತಿದ್ದ ಎನ್ನುವ ಆರೋಪಗಳೂ ಶಿಕ್ಷಕನ ಮೇಲಿದೆ. ಹಲವು ಆರೋಪಗಳೊಂದಿಗೆ ಗ್ರಾಮಸ್ಥರು ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು. ಎಲ್ಲದರ ಪರಿಣಾಮ ಆತನನ್ನು ಈಗ ಅಮಾನತುಗೊಳಿಸಲಾಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟೂ ಎಷ್ಟು ಜನರಿಗೆ ಕೊರೋನಾ ಬಂದಿದೆ? -ಇಲ್ಲಿದೆ ಹಲವು ಮಾಹಿತಿ

Home add -Advt

 

Related Articles

Back to top button