Kannada NewsKarnataka News

*ನವಜಾತ ಶಿಶು ಮಾರಾಟ: ವೈದ್ಯೆ ಸೇರಿ ನಾಲ್ವರ ಬಂಧನ*

ಪ್ರಗತಿವಾಹಿನಿ ಸುದ್ದಿ: ಅಕ್ರಮವಾಗಿ ನವಜಾತ ಶಿಶು ಮಾರಾಟ ಮಾಡಿದ್ದ ವೈದ್ಯರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ ಜೈಲಗೆ ಕಳುಹಿಸಿದ್ದಾರೆ.

ಬಂಧಿತರನ್ನು ಮಂಗಳೂರು ಮೂಲದ ವೈದ್ಯ ಡಾ.ಸೋಮೇಶ್ ಸೋಲೋಮನ್, ಬೋಕರ್ ಮಹಿಳೆ ವಿಜಯಲಕ್ಷ್ಮಿ ಹಾಗೂ ಆರೋಪಿ ನವನೀತ್ ನಾರಾಯಣ ಎಂದು ಗುರುತಿಸಲಾಗಿದೆ.

ನವನೀತ್ ನಾರಾಯಣ ಎಂಬಾತ ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಸಂತ್ರಸ್ತೆಗೆ ಮಗು ಹುಟ್ಟಿದ ನಂತರ ಉಡುಪಿ ಮೂಲದ ದಂಪತಿಗಳು ಆಸ್ಪತ್ರೆಯಿಂದಲೇ ಮಗುವನ್ನು ಖರೀದಿಸಿದ್ದರು.

ವಿಜಯಲಕ್ಷ್ಮಿ ಎಂಬ ಮಹಿಳೆ ಮಧ್ಯಸ್ಥಿಕೆ ವಹಿಸಿ 4 ಲಕ್ಷಕ್ಕೆ ಮಗು ಮಾರಾಟ ಮಾಡಿದ್ದಾರೆ. ಇದರಲ್ಲಿ ವೈದ್ಯ ಡಾ.ಸೋಮೇಶ್ ಸೋಲೋಮನ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುದೆ.

Home add -Advt

ಈ ಸಂಬಂಧ ಉಡುಪಿಯ ಶಿರ್ವ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button