Latest

ಹಿರಿಯ ಪತ್ರಕರ್ತ ಜಿ.ಎಂ. ಕುಲಕರ್ಣಿ ನಿಧನ

  ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಹಾವೇರಿ/ ಬೆಂಗಳೂರು:  ಹಾವೇರಿಯ ಹಿರಿಯ ಪತ್ರಕರ್ತ ಜಿ.ಎಂ. ಕುಲಕರ್ಣಿ(56) ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಉದಯ ಟಿವಿ ಮತ್ತು ಕನ್ನಡ ಪ್ರಭ ದಿನಪತ್ರಿಕೆ ಕುಲಕರ್ಣಿ ಅವರು ಸೇವೆ ಸಲ್ಲಿಸಿದ್ದಾರೆ. ಇಂದು ಮುಂಜಾನೆ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು – ಬಳಗವವಿದೆ. ಮೃತರ ಅಂತ್ಯಕ್ರಿಯೆ ಹಾವೇರಿ ನಗರದ ಮುಕ್ತಿದಾಮ ಸಂಜೆ ಅಂತ್ಯಕ್ರಿಯೆ ನಡೆಯಿತು.‌

Home add -Advt

ಜಿ.ಎಂ.ಕುಲಕರ್ಣಿ ಅವರು ಕತ್ತಲಲ್ಲಿ ಕಾಲಿ ತಟ್ಟೆ ಹಿಡಿದವರು ಎಂಬ ಕವನ ಸಂಕಲನ ಬರೆದಿದ್ದರು. ಜೊತೆಗೆ ಸಿಂಚನ ಪ್ರಕಾಶನ ಹೊಂದಿದ್ದರು.

ಅವರ ಸಾವಿನ ಸುದ್ದಿ ನನಗೆ ವೈಯಕ್ತಿಕವಾಗಿ ಬಹಳ ದುಃಖ ಉಂಟು ಮಾಡಿದೆ. ದೇವರು ಕುಲಕರ್ಣಿ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಭೀಕರ ಅಪಘಾತ; ಹಿರಿಯ ಪತ್ರಕರ್ತ ಬಲಿ

Related Articles

Back to top button