ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ಯುಎಸ್ ಸುಪ್ರೀಂ ಕೋರ್ಟ್ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಅಲ್ಲಿನ ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದು ಸೆಕ್ಸ್ ಮುಷ್ಕರ ಘೋಷಿಸಿದ್ದಾರೆ.
ಈ ಅಭಿಯಾನವೀಗ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರತೆ ಪಡೆದಿದ್ದು ಎಲ್ಲೆಡೆ ಸದ್ದುಮಾಡತೊಡಗಿದೆ. #SexStrike ಹಾಗೂ #Abstinence ಎಂಬ ಟ್ವೀಟರ್ ಅಕೌಂಟ್ ನಲ್ಲಿ ಟ್ವೀಟ್ ಗಳ ಸುರಿಮಳೆ ಆರಂಭಗೊಂಡಿದ್ದು ತಮ್ಮ ಹೋರಾಟವನ್ನು ಪುರುಷರೂ ಬೆಂಗಲಿಸಬೇಕೆಂಬ ಆಗ್ರಹಗಳು ವ್ಯಕ್ತವಾಗಿವೆ.
ತಮಗೆ ಇಷ್ಟವಿಲ್ಲದ ಗರ್ಭಧಾರಣೆಯ ಅಪಾಯವನ್ನು ಎದುರಿಸಲು ತಾವು ಸಿದ್ಧರಿಲ್ಲ. ಹೀಗಾಗಿ ಯಾವ ಪುರುಷರ ಜೊತೆಗೂ ಲೈಂಗಿಕ ಸಂಪರ್ಕ ಮಾಡುವುದಿಲ್ಲ. ಒಂದೊಮ್ಮೆ ಪುರುಷ ತಮ್ಮ ಪತಿಯೇ ಆಗಿದ್ದಲ್ಲೂ ತಾವು ಗರ್ಭಧಾರಣೆಗೆ ಬಯಸುವವರೆಗೆ ಲೈಂಗಿಕ ಸಂಪರ್ಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಹುತೇಕ ಮಹಿಳೆಯರು ಹೇಳಿಕೊಂಡಿದ್ದಾರೆ.
ಮಹಿಳೆಯರ ಈ ಹೋರಾಟ ಪುರುಷರನ್ನೂ ಸಂದಿಗ್ಧಕ್ಕೀಡುಮಾಡಿದ್ದು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಪ್ರತಿಭಟನಾ ನಿರತ ಮಹಿಳೆಯರ ಪರವೇ ತಮ್ಮ ಧೋರಣೆ ವ್ಯಕ್ತಪಡಿಸಿದ್ದಾರೆ.
ಕರಾವಳಿಯಲ್ಲಿ ಇನ್ನೂ 5 ದಿನ ಸುರಿಯಲಿದೆ ಭಾರಿ ಮಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ