Latest

ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಅಮಾನತು

ಪ್ರಗತಿವಾಹಿನಿ ಸುದ್ದಿ, ರಾಯಚೂರು: ಶಾಲೆಗೆ ಬಂದ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಶಾಲಾ ಶಿಕ್ಷಕ ಮಹಮ್ಮದ್ ಅಜರುದ್ದೀನ್ ಅಮಾನತುಗೊಂಡ ಶಿಕ್ಷಕ. ಈತ ಶಾಲೆಗೆ ಬಂದ ಮಕ್ಕಳ ಮರ್ಮಾಂಗ ಅಳತೆ ಮಾಡುವ ವಿಕೃತ ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದೆ.

ಈತನ ವಿಕೃತಿಗೆ ಒಳಗಾದ ವಿದ್ಯಾರ್ಥಿಗಳು ಪಾಲಕರಲ್ಲಿ ದೂರು ಹೇಳಿಕೊಳ್ಳುತ್ತಿದ್ದು ಈತನ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ಈ ಶಿಕ್ಷಕನ ವಿಕೃತಿಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಾರ್ವಜನಿಕರ ದೂರಿನ ಮೇರೆಗೆ  ತನಿಖೆ ಕೈಗೊಂಡ ರಾಯಚೂರು ಡಿಡಿಪಿಐ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಾನೂನಿನ ವಿರುದ್ಧ ಸಿಡಿದೆದ್ದು ಸೆಕ್ಸ್ ಮುಷ್ಕರ ಘೋಷಿಸಿದ ಮಹಿಳೆಯರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button