*ಬೆಳಗಾವಿ ಸಿಸಿಬಿ ಪೊಲೀಸರಿಂದ ಇಬ್ಬರು ಕಳ್ಳರ ಬಂಧನ : 5 ಬೈಕ್ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಮನೆಗಳ್ಳತನ, ವಾಹನ ಕಳ್ಳತನ ಪ್ರಕರಣಗಳ ಪತ್ತೆ ಕುರಿತು ತನಿಖೆ ನಡೆಸಿದ ಬೆಳಗಾವಿಯ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿ ನಗರ ಅಪರಾಧ ವಿಭಾಗ(ಸಿಸಿಬಿ)ದ ಪಿಎಸ್‌ಐ ಮಂಜುನಾಥ ಭಜಂತ್ರಿ ನೇತೃತ್ವದ ವಿಶೇಷ ತಂಡವು ಆರೋಪಿ ನಂ1 ರಜತ ಸಂಜಯ ಶಿವಣಗೇಕರ, (29), ಆರೋಪಿ ನಂ2 ವಿಠಲ ಸದಪ್ಪ ಆರೇರ (38) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ನಂ.1 ಎಪಿಎಮ್ ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಲ್‌ಇ ಆಸ್ಪತ್ರೆ ರಸ್ತೆಯಲ್ಲಿ ಕಳ್ಳತನ ಮಾಡಿರುವುದು ತನಿಖೆ ವೇಳೆ ಭಹಿರಂಗವಾಗಿದೆ. ಆರೋಪಿ ನಂ.2 ಮಾರ್ಕೆಟ್ ಠಾಣೆಯ ಪೋರ್ಟ ರಸ್ತೆಯಲ್ಲಿ ಬೈಕ್ ಕಳ್ಳತನ ಮಾಡಿದ ಬಗ್ಗೆ ತನಿಖೆ ವೇಳೆ ಭಹಿರಂಗವಾಗಿದೆ.
ಆರೋಪಿತರಿಂದ 2 ಹೊಂಡಾ ಆಕ್ಟಿವಾ, 2 ಸೈಂಡರ್ ಮೋಟಾರ್ ಸೈಕಲ್‌ಗಳನ್ನು ಹಾಗೂ ಒಂದು ಬಜಾಜ ಪ್ಲಾಟಿನಾ ಹೀಗೆ ರೂ. 1,20,000 ಮೌಲ್ಯದ ಒಟ್ಟು 5 ಬೈಕ್‌ಗಳನ್ನು ಅವರಿಂದ ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



