Belagavi NewsBelgaum NewsKannada NewsKarnataka News

*ಶಾಹಾಪೂರ ಕಲ್ಲು ತೂರಾಟ ಪ್ರಕರಣ: 10 ಜನ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಶಾಹಾಪೂರದಲ್ಲಿ ನಿನ್ನೆ ನಡೆದ ಕಲ್ಲು ತೂರಾಟಕ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ವಶಕ್ಕೆ ಪಡೆದಿರುವ ಬೆಳಗಾವಿ ಪೊಲೀಸರು ಎರಡು ಪ್ರತ್ಯೆಕ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದಾರೆ.‌

ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್‌ ಆಡುವ ಸಂದರ್ಭದಲ್ಲಿ ಎರಡು ಯುವಕರ ಗುಂಪಿನ ನಡುವೆ ಜಗಳವಾಗಿ, ಕಲ್ಲು ತೂರಾಟ ನಡೆದಿತು. ಬಳಿಕ ಈ ಘಟನೆಯಲ್ಲಿ ಮಕ್ಕಳ ಅವರ ಪೋಷಕರು ಭಾಗಿಯಾಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೊಗುವ ಮುನ್ನ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದರು.‌

ಕಲ್ಲು ತೂರಾಟ ನಡೆದ ಕೂಡಲೇ ಶಹಾಪೂರ ಪೊಲೀಸ್ ಠಾಣೆಯ ನಮ್ಮ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಘಟನೆಯ ಸಂಭಂದ ಒಟ್ಟು 2 ಪ್ರಕರಣ ದಾಖಲಿಸಿಕೊಂಡು, 10 ಜನರನ್ನು ಬಂಧಿಸಿದ್ದಾರೆ.‌ ಜೊತೆಗೆ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ.‌ ಸದ್ಯ ಶಾಹಾಪೂರದಲ್ಲಿ ವಾತಾವರಣ ಸಹಜ ಸ್ಥಿತಿಯಲ್ಲಿದೆ ಎಂದು ಬೆಳಗಾವಿ ಪೊಲೀಸರು ಮಾಹಿತಿ ನೀಡಿದ್ದಾರೆ.

Home add -Advt

Related Articles

Back to top button