Kannada NewsKarnataka NewsLatest

*ಸಿಎಂ ಸಿದ್ದರಾಮಯ್ಯಗೆ ಅಪರೂಪದ ಉಡುಗೊರೆ ನೀಡಿದ ಶಾಲಿನಿ ರಜನೀಶ್!*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸಹಸ್ರ ದಿನ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಂದು ಅಪರೂಪದ ಉಡುಗೊರೆಯೊಂದನ್ನು ನೀಡಿದರು.

ಮುಖ್ಯಮಂತ್ರಿಗಳು ಈ ಬಾರಿ ಮುಖ್ಯಮಂತ್ರಿಯಾಗಿ ಸಾವಿರ ದಿನ ಪೂರೈಸಿದ್ದಲ್ಲದೆ ಒಟ್ಟಾರೆ 2,792 ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ದಿ.ದೇವರಾಜ ಅರಸು ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ಅವರಿಗೆ ಅಭಿನಂದನೆ ಹಾಗೂ ಉಡುಗೊರೆಗಳು ಬರುತ್ತಿವೆ.

ಮಂಗಳವಾರ ಶಾಲಿನಿ ರಜನೀಶ್ ಅವರು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಹಸ್ರ ಕಾಳುಗಳನ್ನು ಒಳಗೊಂಡ ಸಿದ್ದರಾಮಯ್ಯ ಭಾವಚಿತ್ರವನ್ನು ನೀಡುವ ಮೂಲಕ ಅಭಿನಂದಿಸಿದರು.

ಮುಖ್ಯಮಂತ್ರಿಗಳು ಅತ್ಯಂತ ಹರ್ಷಚಿತ್ತರಾಗಿ ನಗುಮೊಗದಿಂದ ಉಡುಗೊರೆ ಸ್ವೀಕರಿಸಿದರು.

Home add -Advt

Related Articles

Back to top button