Kannada NewsKarnataka News

ಔಷಧಿ ಸಸ್ಯ ವನ ನಿರ್ಮಾಣಕ್ಕೆ ಅಗತ್ಯ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ   ಶಂಕರಗೌಡ ಪಾಟೀಲ್  ಬೆಳಗಾವಿಯ ಐ.ಸಿ.ಎಂ.ಆರ್ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ಕೇಂದ್ರಕ್ಕೆ  ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿಜ್ಞಾನಿ ಹಾಗೂ ನಿರ್ದೇಶಕ ಡಾ: ದೇಬ ಪ್ರಸಾದ್ ಚಟ್ಟೋಪಾಧ್ಯಾಯ ಬರಮಾಡಿಕೊಂಡು ಹೂಗುಚ್ಛ ನೀಡಿ ಸ್ವಾಗತ ಮಾಡಿದರು.
ನಂತರ ಸಂಸ್ಥೆಯ ಸಭಾಂಗಣದಲ್ಲಿ ಸಭೆ ನಡೆಸಿದರು. ಈ ವೇಳೆ   ಪಾರಂಪರಿಕ ಚಿಕಿತ್ಸಾ ಪದ್ಧತಿಗಳು ಹಾಗೂ  ಆಯುರ್ವೇದಿಯ ಮನೆ ಮದ್ದುಗಳ ಬಗ್ಗೆ ತಿಳಿಸುತ್ತಾ ಪ್ರಸ್ತುತ ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ  ಹಿರಿಯ ವಿಜ್ಞಾನಿ ಹಾಗೂ ನಿರ್ದೇಶಕ ಡಾ: ದೇಬಪ್ರಸಾದ್  ಚಟ್ಟೋಪಾಧ್ಯಾಯ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಶೋಧನಾ ಕಾರ್ಯಗಳು ಅನುಷ್ಠಾನಗೊಳಿಸಲು ಬೇಕಾಗುವ ಅನುದಾನ ಮತ್ತು ಸೌಲಭ್ಯಗಳ  ಬಗ್ಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಶಂಕರಗೌಡ ಪಾಟೀಲ, ಆಯುರ್ವೇದ ಔಷಧಗಳ ಮಹತ್ವ ಹಾಗೂ ಬೆಳಗಾವಿಯ  ಸುತ್ತಮುತ್ತಲು ಸಿಗುವ ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮತ್ತು ಆವರಣದಲ್ಲಿ ಖಾಲಿ ಇರುವ ಜಾಗದಲ್ಲಿ ಔಷಧಿ ಸಸ್ಯ ವನ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
 ಆಯುಷ್ ಸಂಶೋಧನಾಧಿಕಾರಿ ಡಾ: ಚಂದ್ರಶೇಖರ್ ಎಂ ಎಸ್ ಮಾತನಾಡಿ, ಸಂಸ್ಥೆಯ ಆವರಣದಲ್ಲಿ ಆಯುಷ್ ಔಷಧಗಳ  ಚಿಕಿತ್ಸಾ ಸಂಶೋಧನೆಗಳ ಬಗ್ಗೆ ಅವಶ್ಯ ಇರುವ ಪ್ರಾದೇಶಿಕ ಮಟ್ಟದ ಆಯುಷ್ ಚಿಕಿತ್ಸಾ ಸಂಶೋಧನಾ ಕೇಂದ್ರದ ಅಗತ್ಯತೆ ಕುರಿತು ಮಾಹಿತಿ ನೀಡಿದರು .
ಇದಕ್ಕೆ ಸ್ಪಂದಿಸಿದ ಶಂಕರಗೌಡ,  ಕೇಂದ್ರ ಆರೋಗ್ಯ ಸಚಿವರು ಮತ್ತು ಆಯುಷ್ ಸಚಿವರನ್ನು ಭೇಟಿಯಾಗಿ ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಪ್ರಾದೇಶಿಕ ನೋಡಲ್ ಅಧಿಕಾರಿ ಡಾ‌ ಶ್ರೀಕಾಂತ್ ಸುಣಧೋಳಿ ಮಾತನಾಡಿ ಇಲಾಖೆಯಲ್ಲಿ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ವಿವರಿಸಿದರು .
ಸಭೆ ಮುಕ್ತಾಯದ ನಂತರ  ಸಂಸ್ಥೆಯ ಆವರಣದಲ್ಲಿ  ಶಂಕರಗೌಡ ಪಾಟೀಲ್ ಅವರು ಔಷಧಿ ಸಸ್ಯ ನೆಡುವ ಮೂಲಕ ಆವರಣದಲ್ಲಿರುವ ಔಷಧಿ ವನದ ಬಗ್ಗೆ ಮಾಹಿತಿ ಪಡೆದುಕೊಂಡರು.                  ಬೆಳಗಾವಿಯ ಐ,ಸಿ,ಎಂ,ಆರ್  ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ಕೇಂದ್ರದ ವಿಜ್ಞಾನಿಗಳಾದ ಡಾ:  ಬಾನಪ್ಪ, ಡಾ: ಹರ್ಷ ಹೆಗಡೆ, ಡಾ: ಚೇತನ್,  ಡಾ: ಹರೀಶ್,   ಡಾ: ಆರ್ ಕೆ ಜೋಶಿ,  ಡಾ: ವಿ ಉಮಾಶಂಕರ್ ಹಾಗೂ ಇನ್ನಿತರರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button