
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಹಿರಿಯ ಸಾಮಾಜಿಕ ಕಾರ್ಯಕರ್ತೆ, ನಿವೃತ್ತ ಪ್ರಾಚಾರ್ಯ ದಿವಂಗತ ಡಿ.ಎ.ಹೆಗಡೆವರ ಪತ್ನಿ ಶಾಂತಾ ಹೆಗಡೆ ಶುಕ್ರವಾರ ಚನ್ನಮ್ಮ ನಗರದ ಅವರ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ವಿವಿಧ ಮಹಿಳಾ ಮಂಡಳಗಳನ್ನು ಸ್ಥಾಪಿಸಿ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಶಾಂತಾ ಹೆಗಡೆ, 40 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಭುವನೇಶ್ವರಿ ಉತ್ಸವ ಆರಂಭಿಸಿ ಇಂದಿಗೂ ವಿಜ್ರಂಭಣೆಯಿಂದ ಮುನ್ನಡೆಸುತ್ತಿದ್ದರು.
ಸುಮಾರು 50 ವರ್ಷಗಳಷ್ಟು ಹಳೆಯದಾದ ವನಿತಾ ವಿಕಾಸ್ ಮಂಡಲದ ಸ್ಥಾಪಕ ಸದಸ್ಯರೂ ಆಗಿದ್ದರು. ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುತ್ತ, ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದರು. ಇಂದು ಶಾಂತಾ ಹೆಗಡೆ ವಿಧಿವಶರಾಗಿದ್ದಾರೆ.
ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಮಗಳನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.