Kannada NewsNational

*ಕುಸಿದು ಬಿದ್ದ ಕಾರ್ಖಾನೆ: ಆರು ಕಾರ್ಮಿಕರು ಸಾವು*

ಪ್ರಗತಿವಾಹಿನಿ ಸುದ್ದಿ : ಇಡೀ ಕಾರ್ಖಾನೆಯೇ ಕುಸಿದು ಬಿದ್ದು ಆರು ಜನ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆಯುವ ಛತ್ತೀಸ್‌ಗಡದ ರಾಯ್‌ಪುರದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕಾರ್ಖಾನೆಯು ನಿರ್ಮಣ ಹಂತದಲ್ಲಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಕಾರ್ಖಾನೆಯ ಕುಸಿದು ಬಿದ್ದಿರುವ ಅವಶೇಷಗಳಡಿಯಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಆತಂಕ ವ್ಯಕ್ತವಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಕಾರ್ಖಾನೆಯಲ್ಲಿ ಸುಮಾರು 12 ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಕಾಂಕ್ರೀಟ್ ನ ದೊಡ್ಡದೊಂದು ಸ್ಲಾಬ್ ಕುಸಿದು ಬಿದ್ದಿತ್ತು. ಕಾರ್ಮಿಕರು ಏಕಾಏಕಿ ಅವಶೇಷಗಳಡಿ ಹೂತು ಹೋಗಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾಗಿರುವ ಕಾರ್ಮಿಕರಿಗಾಗಿ ಹುಡುಕಾಟ ನಡೆಸಿದ್ದು ಸಾವಿಸ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವವಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button