Kannada NewsKarnataka NewsLatest

ಶಾಂತಾದೇವಿ ಕಣವಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖ್ಯಾತ ಕಥೆಗಾರ್ತಿ, ಲೇಖಕಿ ಶಾಂತಾದೇವಿ ಕಣವಿ ಅವರು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 88 ವರ್ಷ ವಯಸ್ಸಾಗಿತ್ತು. ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

Home add -Advt

ಪ್ರಖ್ಯಾತ ಕವಿ ಚನ್ನವೀರ ಕಣವಿ ಅವರ ಪತ್ನಿಯಾದ ಶಾಂತಾದೇವಿ ಕಣವಿ ಅವರು ಸಾಹಿತ್ಯ ಕ್ಷೇತ್ರದಲ್ಲೀ ತಮ್ಮದೇ ಆದ ಛಾಪು ಮೂಡಿಸಿದ್ದರು. ಅನೇಕ ಕಥೆ, ಕಾದಂಬರಿ, ಲೇಖನಗಳ ಮೂಲಕ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಗಿಡ್ಡನರವರ್ ಮನೆತನದವರಾಗಿದ್ದ ಚನ್ನವೀರ ಕಣವಿ ಅವರನ್ನು ವರಿಸಿ ಅವರ ಸಾಹಿತ್ಯ ಸೃಷ್ಟಿಗೆ ಸ್ಫೂರ್ತಿಯಾಗಿದ್ದರು.

ಅವರ ಮಗಳು ಡಾ.ರಂಜನಾ ಗೋದಿ ಅವರೂ ಕವಿಯಿತ್ರಿಯಾಗಿದ್ದು ಬೆಳಗಾವಿಯ ಪ್ರಸಿದ್ಧ ವೈದ್ಯರಾಗಿದ್ದ ಡಾ.ಗೋದಿಯವರ ಪತ್ನಿ. ಮೃತರ ಅಂತ್ಯಕ್ರಿಯೆ ಶನಿವಾರ ಧಾರವಾಡದಲ್ಲಿ ನಡೆಯಲಿದೆ.

Related Articles

Back to top button