ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ ಬಡವರು: ಕಣ್ಣೀರಿಟ್ಟ ಗದಗ ಜನತೆ

ಪ್ರಗತಿವಾಹಿನಿ ಸುದ್ದಿ; ಗದಗ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಆರಂಭಿಕ ಲಾಕ್ ಡೌನ್ ಅವಧಿ ನಾಳೆ ಏ.14ರಂದು ಮುಕ್ತಾಯವಾಗಲಿದ್ದು, ನಾಳೆಯಿಂದ ಏ.30ರವರೆಗೆ ಲಾಕ್ ಡೌನ್ ಎರಡನೇ ಅವಧಿ ಆರಂಭವಾಗಲಿದೆ. ಈ ನಡುವೆ ಲಾಕ್ ಡೌನ್ ನಿಂದಾಗಿ ರಾಜ್ಯಾದ್ಯಂತ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಲಾಕ್‍ಡೌನ್ ನಿಂದಾಗಿ ಇದೀಗ ಗದಗ ಜಿಲ್ಲೆಯಲ್ಲಿ ಬಡ ಜನರು, ಕೂಲಿಕಾರರು ಒಪ್ಪತ್ತಿನ ಊಟಕ್ಕೂ ಇಲ್ಲದೇ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇದು ಕೇವಲ ಗದಗದ ಸ್ಥಿತಿ ಮಾತ್ರವಲ್ಲ. ರಾಜ್ಯದ ಹಲವು ಜಿಲ್ಲೆಗಳ ಸ್ಥಿತಿಯೂ ಇದೇ ಆಗಿದೆ.

ಗದಗ ಜಿಲ್ಲೆಯ ಹೊಂಬಳ ನಾಕಾ ಜನತಾ ಕಾಲೋನಿ ಜನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಲ್ಲಿನ ಜನರಿಗೆ ಉಚಿತ ಹಾಲು, ದಿನಸಿ, ಪಡಿತರ ಧಾನ್ಯವೂ ಸಿಕ್ಕಿಲ್ಲ. ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳಿಗೆ ಇವರು ಕೈಮುಗಿದು ಪರಿ ಪರಿಯಾಗಿ ಬೇಡಿಕೆ ಇಟ್ಟು ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಲಾಕ್ ಡೌನ್ ಗೆ ನಮ್ಮ ಬೆಂಬಲವಿದೆ. ಆದರೆ ನಮ್ಮ ಹೊಟ್ಟೆಗೂ ಏನಾದ್ರೂ ಕೊಡಿ ಎಂದು ಊಟ, ಉಪಹಾರಕ್ಕಾಗಿ ಮಕ್ಕಳು, ವೃದ್ಧರು, ಮಹಿಳೆಯರು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

Home add -Advt

Related Articles

Back to top button