Belagavi NewsBelgaum NewsKarnataka News

*ಗಳತಗಾ ಮತ್ತು ಸೌಂದಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತೀಕರಣ: ಶಾಸಕಿ ಶಶಿಕಲಾ ಜೊಲ್ಲೆ *

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ತಾಲೂಕಿನ ಗಳತಗಾ ಮತ್ತು ಸೌಂದಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು 9 ನೇ ವರ್ಗದಿಂದ 10 ನೇ ವರ್ಗದವರೆಗೆ ಪ್ರೌಢಶಾಲೆಗಳನ್ನಾಗಿ ಉನ್ನತೀಕರಣಗೊಳಿಸಿ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಬಡ ಮಕ್ಕಳ ಉನ್ನತ ಶಿಕ್ಷಣದ ಸಲುವಾಗಿ ಇವುಗಳನ್ನು ಮಂಜೂರು ಮಾಡಿಸಲಾಗಿದ್ದು,ಸಾಮಾಜಿಕ,ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಈ ಪ್ರೌಢಶಾಲೆಗಳು ಅನುಕೂಲವಾಗಲಿವೆ. ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಶಾಲೆಗಳು ಗಳತಗಾ ಮತ್ತು ಸೌಂದಲಗಾ ಪ್ರೌಢಶಾಲೆಗಳಾಗಿ ಪರಿವರ್ತನೆಗೊಂಡಿವೆ ಎಂದು ಹೇಳಿದರು.

ಈಗಾಗಲೇ ನಿಪ್ಪಾಣಿ ಕ್ಷೇತ್ರದಲ್ಲಿ ವಲಯದಲ್ಲಿ 10 ಸರ್ಕಾರಿ ಪ್ರೌಢಶಾಲೆಗಳು ಕೆಲಸ ನಿರ್ವಹಿಸುತ್ತಿದ್ದು,ಎರಡು ಹೊಸ ಶಾಲೆಗಳ ಮಂಜೂರಾತಿಯಿಂದ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ 12ಕ್ಕೆ ಏರಿದೆ ಎಂದು ಶಶಿಕಲಾ ಜೊಲ್ಲೆ ಅವರು ಹೇಳಿದ್ದಾರೆ.

Home add -Advt

ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಗಳತಗಾ ಮತ್ತು ಸೌಂದಲಗಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳು ಈಗಾಗಲೇ 08 ತರಗತಿವರೆಗೆ ಅತ್ಯಂತ ಸುವ್ಯವಸ್ಥಿತವಾಗಿ ನಡೆದಿರುತ್ತವೆ. ಪ್ರತಿ ವರ್ಷ ಸದರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ 09 ತರಗತಿಗೆ ದಾಖಲಾಗುವ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗಿದೆ.ಸದರಿ ಶಾಲೆಯಿಂದ ಸೌಂದಲಗಾ ಗ್ರಾಮದಿಂದ ಕನ್ನಡ ಪ್ರೌಢ ಶಾಲೆಗಳು ಸುಮಾರು 08 ಕೀ.ಮಿ. ಕ್ಕಿಂತಲೂ ಹೆಚ್ಚಿಗಿದ್ದು ಇದರಿಂದ ಮುಂದಿನ ವಿದ್ಯಾಭ್ಯಾಸ ಮಾಡುವ ಬಗ್ಗೆ ಮಕ್ಕಳ ಪಾಲಕರು ಆಸಕ್ತಿ ತೋರಿಸುವುದಿಲ್ಲ.ಕಾರಣ ಬಹಳಷ್ಟು ಮಕ್ಕಳ ವಿದ್ಯಾಭ್ಯಾಸ ಅರ್ಧದಲ್ಲಿ ಕುಂಠಿತಗೊಂಡು ಕುಲಿ ಕಾರ್ಮಿಕರಾಗಿ ತಮ್ಮ ವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ. ಜೊತೆಗೆ ಗಳತಗಾ ಶಾಲೆಯು ಸಹಿತ ಉನ್ನತಿಕರಣ ಅತೀ ಅವಶ್ಯಕವಿದೆ. ಸದರಿ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು 09 ನೇ ತರಗತಿ ನಡೆಯುತ್ತಿರುವ ಶಾಲೆಗಳಲ್ಲಿ 09 ಮತ್ತು 10 ನೇ ತರಗತಿ ಪ್ರಾರಂಭಿಸಿ ಮಕ್ಕಳಿಗೆ ಕಲಿಯಲು ಅನೂಕೂಲ ಮಾಡಿಕೊಡಲು ಕೋರಿದ್ದು ನಮ್ಮ ಮನವಿಗೆ ಸ್ಪಂದಿಸಿ ಶಾಲಾ ಶಿಕ್ಷಣ ಇಲಾಖೆ ಮಂಜೂರು ಮಾಡಿ ಆದೇಶ ಹೊರಡಿಸಿದೆ ಎಂದು ಶಾಸಕರಾದ ಶಶಿಕಲಾ ಜೊಲ್ಲೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button