
ಪಕ್ಷದ ಏಳ್ಗೆಗಾಗಿ ಮತ್ತಷ್ಟು ಕಾರ್ಯಕರ್ತರ ಬಲ ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ನಿಪ್ಪಾಣಿ ಮತಕ್ಷೇತ್ರದ ಭಿವಶಿ ಗ್ರಾಮದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಹದನಾಳದ ಕಾಂಗ್ರೇಸ್ ಯುವಕಾರ್ಯಕರ್ತರು ಬಿಜೆಪಿ ಸೇರಿದರು.
ಸಂದೀಪ ಕಾಂಬಳೆ ಹಾಗೂ ಅವರ ತಂಡ ಭಾರತೀಯ ಜನತಾ ಪಕ್ಷಕ್ಕೆ ಸೆರ್ಪಡೆಗೊಂಡಿದ್ದು ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿದರು. ನಮ್ಮ ಸರ್ಕಾರದ ಅಭಿವೃದ್ದಿ ಕಾರ್ಯಗಳು, ಜನಪರ ಯೋಜನೆಗಳು ಪ್ರಜೆಗಳ ಬಳಿ ತಲುಪುತ್ತಿವೆ. ಹೀಗಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸರ್ವರಿಗೂ ಅಭಿನಂದನೆಗಳು ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಮಾಜಿ ಅಧ್ಯಕ್ಷ ಸಂಜಯ ಶಿಂತ್ರೆ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ