ನಿಪ್ಪಾಣಿ ಮತಕ್ಷೇತ್ರದ ಜನರ ಪ್ರೀತಿ ಮರೆಯಲಾರೆ; ರಾಜ್ಯದಲ್ಲಿ ಮಾದರಿ ಕ್ಷೇತ್ರಕ್ಕೆ ಪಣ – ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿಪ್ಪಾಣಿಯ ಮುನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಜರುಗಿದ ಸಚಿವೆ ಜೊಲ್ಲೆಯವರ 53ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ವೈಸ್-ಚೇರ್ಮನ್ ಮಲಗೊಂಡಾ ಪಾಟೀಲ ಮತ್ತು ಸಂಚಾಲಕರು ಬೃಹತ್ ಪುಷ್ಪಹಾರ ಹಾಕಿ ಶುಭಾಶಯ ಕೋರಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಂಚಾಲಕ ಆರ್.ವೈ ಪಾಟೀಲ, ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಕಮಲ ಆಕಾರದ ಪ್ರತಿಕೃತಿಯಲ್ಲಿ ನಿಂತು ಮೈದಾನದಲ್ಲಿ ಉಪಸ್ಥಿತರಿದ್ದ ಸಾವಿರಾರು ಅಭಿಮಾನಿಗಳಿಗೆ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸಿದರು.
ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಅಮಿತ ರಣದಿವೆ ಮತ್ತಿತರರು ಸುಮಾರು ೨೫೦ಕ್ಕೂ ಅಧಿಕ ಕೆಜಿ ತೂಕ್ ಸೇಬು ಹಣ್ಣಿನ ಹಾರವನ್ನು ಕ್ರೇನ್ ಮೂಲಕ ವೇದಿಕೆಯಲ್ಲಿ ಹಾಕಿ ಸಚಿವೆ ಜೊಲ್ಲೆಯವರನ್ನು ಶುಭಾಶಯಗಳನ್ನು ಕೋರಲಾಯಿತು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಮತ್ತಿತರರು ಇದ್ದಾರೆ.
ತೆರೆದ ವಾಹನದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರನ್ನು ಹಾಗೂ ಕುಟುಂಬ ಸದಸ್ಯರನ್ನು ಕಾರ್ಯಕ್ರಮ ಸ್ಥಳದವರೆಗೆ ಕರೆತರಲಾಯಿತು.
ಈ ವೇಳೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ’ಕ್ಷೇತ್ರದಲ್ಲಿ ರೂ.೧೬೪೭ ಕೋಟಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದರ ಕುರಿತು ನನಗೆ ತೃಪ್ತಿ ತಂದಿದೆ. ಇಂದಿನ ಕ್ಷಣ ಹಾಗೂ ನಿಮ್ಮ ಪ್ರೇಮ ನಾನು ಎಂದಿಗೂ ಮರೆಯಲಾರೆ’ ಎಂದು ಹೇಳಿದರು.
ಭಾನುವಾರ ಇಲ್ಲಿನ ಮುನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಜರುಗಿದ ಅವರ 53ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸಚಿವೆ ಜೊಲ್ಲೆ ಮಾತನಾಡಿದರು. ’ನನಗೆ ಮತದಾನ ಮಾಡುವ ಮೂಲಕ ಉಡಿ ತುಂಬಿ ಎರಡು ಬಾರಿ ಶಾಸಕಿಯಾಗಿ ಚುನಾಯಿಸಿದ್ದೀರಿ. ನಿಮ್ಮೆಲ್ಲರ ಆಶಿರ್ವಾದದಿಂದ ಎರಡು ಬಾರಿ ಸಚಿವೆಯಾಗಿದ್ದೇನೆ. ತವರು ಮನೆಯಾದ ನನ್ನ ಕ್ಷೇತ್ರದದವರ ಈ ಉಪಕಾರವನ್ನು ನಾನು ಮತ್ತು ಸಂಸದ ಅಣ್ಣಾಸಾಹೇಬ ಕೊನೆಯ ಶ್ವಾಸ ಇರುವವರೆಗೆ ಮರೆಯಲಾರೇವು. ನಿಪ್ಪಾಣಿ ತಾಲ್ಲೂಕಿನ ಪ್ರಥಮ ಮಹಿಳಾ ಶಾಸಕಿಯಾಗಿ ನೀವೆಲ್ಲರೂ ನನಗೆ ಆಶಿರ್ವದಿಸಿದ್ದಿರಿ, ಇದು ನನ್ನ ಸೌಭಾಗ್ಯ. ಶಾಲೆಗಳು, ಮಂದಿರಗಳ ಅಭಿವೃದ್ಧಿ ನಡೆಯುತ್ತಿರುವುದು ನನಗೆ ತೃಪ್ತಿ ತಂದಿದೆ’ ಎಂದರು.
’ನನ್ನಂತಹ ಒಬ್ಬ ಸಾಮಾನ್ಯ ಮಹಿಳೆ ಸಚಿವೆಯಾಗಿದ್ದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕೃಪೆಯಿಂದ ಈ ಜನ್ಮದಿನ ನಿಮಿತ್ತ ಮಾತ್ರ, ಜನ್ಮದಿನದ ನಿಮಿತ್ತ ಎಲ್ಲರಿಗೂ ಭೆಟಿಯಾಗುವುದೇ ವಿಶೇಷತೆ. ಸಾವಿರಾರು ಸಂಖ್ಯೆಯಲ್ಲಿ ಇಂದು ನೆರೆದು ನನಗೆ ಆಶಿರ್ವದಿಸಿದ್ದಿರಿ, ನಿಜಕ್ಕೂ ನಾನು ಋನಿಯಾಗಿದ್ದೇನೆ’ ಎಂದರು.
ಟಿಎಪಿಎಂಸಿ ಅಧ್ಯಕ್ಷ ಆನಂದಾ ಯಾದವ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪವನ ಪಾಟೀಲ, ಪ್ರಥಮೇಶ ಪಾಟೀಲ, ವೃ?ಭ ಜೈನ, ಶಶಿಕಲಾ ಜೊಲ್ಲೆಯವರ ಶಾಲಾಗುರು ಆರ್.ಬಿ. ದೇಶಪಾಂಡೆ, ಮೊದಲಾದವರು ಮಾತನಾಡಿದರು.
ಗದಗನ ಶ್ರೀಶೈಲ್ ಸ್ವಾಮೀಜಿ, ವಿಜಯಪುರದ ಇ?ಲಿಂಗ ಸ್ವಾಮೀಜಿ, ಸ್ಥಳೀಯ ಮುರುಘಾಮಠದ ಮುರಯಘೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಜೊಲ್ಲೆ ಕುಟುಂಬದ ಸದಸ್ಯರೆಲ್ಲರಿಗೆ ತೆರೆದ ವಾಹನದಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ಭವ್ಯ ದ್ವಿಚಕ್ರ ವಾಹನದ ರ‍್ಯಾಲಿ ತೆಗೆದು ಅವರನ್ನು ಕಾರ್ಯಕ್ರಮ ಸ್ಥಳಕ್ಕೆ ಕಾರ್ಯಕರ್ತರು ಕರೆತಂದರು. ರಸ್ತೆಯುದ್ದಕ್ಕೂ ಹಲವಾರು ಸಂಘ-ಸಂಸ್ಥೆಗಳು, ಮಂಡಳಿಗಳು ಕ್ರೇನ್ ಮೂಲಕ ಬೃಹತ್ ಪುಷ್ಪಹಾರ ಹಾಕಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಬೆಳಗಾವಿ ನಾಕಾ ಬಳಿ ತೆಂಗಿನಕಾಯಿಗಳ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿದ ದೃಶ್ಯ ಮನಮೋಹಕವಾಗಿತ್ತು.
ಕಾರ್ಯಕ್ರಮದಲ್ಲಿ ಅಮಿತ ರಣದಿವೆ ಮತ್ತು ಕಾರ್ಯಕರ್ತರು ಸುಮಾರು ೨೫೦ ಕೆಜಿಗೂ ಅಧಿಕ ತೂಕದ ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಮತ್ತು ೫೩ ಕೆಜಿ ತೂಕದ ಕೇಕ್ ಕತ್ತರಿಸಿ ಸಚಿವೆ ಜೊಲ್ಲೆಯವರನ್ನು ಶುಭಾಶಯಗ ಕೋರಿದರು. ಅದೇ ರೀತಿ ವಿವಿಧ ಗ್ರಾಮದ ನಾಗರಿಕರೂ ಸಹ ೫೩ ಕೆಜಿ ತೂಕದ ಕೇಕ್ ಕತ್ತರಿಸಿ ಶುಭಾಶಯ ಕೋರಿದರು. ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಿಂದಲೂ ಬೃಹತ್ ಪುಷ್ಪಹಾರ ಹಾಕಿ ಶುಭಾಶಯ ಕೋರಿದರು. ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ಮಂಡಳಿಗಳು, ಕಾರ್ಯಕರ್ತರು, ನಾಗರಿಕರು ಹೂಗುಚ್ಛ ಹಾಕಿ, ಪುಷ್ಪಹಾರ ಹಾಕಿ, ಕೇಕ್ ಕತ್ತರಿಸಿ ಸಚಿವೆ ಜೊಲ್ಲೆಯವರನ್ನು ಶುಭಾಶಯ ಕೋರಿದರು.
ಆರಂಭದಲ್ಲಿ ಕೃಷಿ ಸಂಜೀವನಿ ವಾಹನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆದು ಮತ್ತು ಜಯಘೋಷಣೆಗಳನ್ನು ಕೂಗಿ ಅವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಮ್ಮ ಆಡಳಿತಾವಧಿಯಲ್ಲಿ ಕೈಕೊಂಡ ರೂ.೧೬೪೭ ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳ ಪುಸ್ತಕವನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ನಂತರ ಕಾರ್ಯಕರ್ತರು ಪಟಾಕೆ ಸಿಡಿಸ ಸಂಭ್ರಮಿಸಿದರು.
ಮ್ಯಾಗ್ನಂ ಟಫ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ವೈಸ್-ಚೇರ್ಮನ್ ಮಲಗೊಂಡಾ ಪಾಟೀಲ, ರಾಜ್ಯ ಸಕ್ಕರೆ ಮಹಾಮಂಡಳಿಯ ಅಧ್ಯಕ್ಷ ವಿಶ್ವನಾಥ ಕಮತೆ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬೀರೇಶ್ವರ ಸಹಕಾರಿಯ ಅಧ್ಯಕ್ಷ ಜಯಾನಂದ ಜಾಧವ, ವಕ್ಫ್ ಬೋರ್ಡ್ ಚಿಕ್ಕೋಡಿ ಘಟಕದ ಅಧ್ಯಕ್ಷ ಅನ್ವರ್ ದಾಡಿವಾಲೆ, ಸಂಗಮೇಶ ಸಹಕಾರಿ ಸಕ್ಕರೆ ಚೇರ್ಮನ್ ರಾಜೇಂದ್ರ ಪಾಟೀಲ, ಆರ್.ಬಿ. ದೇಶಪಾಂಡೆ, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ಎಫ್‌ಪಿಓ ಅಧ್ಯಕ್ಷ ಸಿದ್ದು ನರಾಟೆ, ಸುರೇಶ ಶೆಟ್ಟಿ, ಸುನೀಲ ಪಾಟೀಲ, ರಾಜೇಶ ಪಾಟೀಲ, ಎಸ್.ಎಸ್. ಬೆನ್ನಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ, ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ವಿಭಾವರಿ ಖಾಂಡಕೆ, ಗ್ರಾಮೀಣ ಘಟಕದ ಅಧ್ಯಕ್ಷೆ ಸರೋಜಿನಿ ಜಮದಾಡೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಭಯ ಮಾನವಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಢವಣೆ, ರವಿ ಹಂಜಿ, ಕಾರ್ಯಕರ್ತರು, ಅಭಿಮಾನಿಗಳು, ಮೊದಲಾದವರು ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.
ಕಮಲದಲ್ಲಿ ಅರಳಿದ ಸಚಿವೆ ಶಶಿಕಲಾ ಜೊಲ್ಲೆ:
ಅಭಿಮಾನಿಗಳು ತಯಾರಿಸಿದ ಕಮಲ ಆಕಾರದ ಪ್ರತಿಕೃತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ನಿಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವೆ ಜೊಲ್ಲೆಯವರು ಕಮಲದಲ್ಲಿ ಅರಳಿದಂತೆ ಎಲ್ಲರಿಗೂ ಕಂಡಿತು. ಅಭಿಮಾನಿಗಳ ಅಭಿಮಾನಿಗೆ ತಲೆಬಾಗಿ ಸಚಿವೆ ಜೊಲ್ಲೆ ಎಲ್ಲರಿಗೂ ಕೈ ಬೀಸಿದರು. ಪುರುಷ ಕಾರ್ಯಕರ್ತರ, ಅಭಿಮಾನಿಗಳ ಶಿಳ್ಳೆ ಮತ್ತು ಮಹಿಳಾ ಕಾರ್ಯಕರ್ತರ, ಅಭಿಮಾನಿಗಳ ಚಪ್ಪಾಳೆಗಳ ಮುಗಿಲು ಮುಟ್ಟಿತ್ತು. ಇದರಲ್ಲಿ ಮಹಿಳೆಯರೂ ಶಿಳ್ಳೆ ಹೊಡೆದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಸಚಿವೆ ಜೊಲ್ಲೆಯವರ ೫೩ನೇ ಹುಟ್ಟುಹಬ್ಬದ ಪ್ರಯುಕ್ತ ದೀಪಕ ಚವಾಣ ಕೊಲ್ಹಾಪೂರದ ಮಹಾಲಕ್ಷ್ಮೀ ದೇವಿಗೆ ಅಭಿಷೇಕ ಹಾಕಿದರು. ಹಾಗೂ ಬಡಜನರಿಗೆ ಬ್ಲ್ಯಾಂಕೇಟ್ ವಿತರಿಸಿದರು. ವಿವಿಧ ಗ್ರಾಮಗಳಲ್ಲಿ ಕೀರ್ತನೆ, ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಹಲವು ನಾಯಕರು ಕಾಂಗ್ರೆಸ್ ಗೆ ಸೇರ್ಪಡೆ
https://pragati.taskdun.com/bjp-leadersu-b-banakarcongress-joinkpcc-office/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ