*ಶಾಸಕಿ ಶಶಿಕಲಾ ಜೊಲ್ಲೆ ಹುಟ್ಟುಹಬ್ಬ: ಹ್ಯಾಜ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ 21,000 ರೂ.ನಗದು ಬಹುಮಾನ ಗೆದ್ದ ಸಿದ್ಧೇಶ್ವರ ಚಂಡಿಗ ಬಳಗ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಶಾಸಕಿ ಶಶಿಕಲಾ ಜೊಲ್ಲೆಯವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ಹ್ಯಾಜ್ ಟ್ಯಾಲೆಂಟ್’ನ ಗ್ರ್ಯಾಂಡ್ ಫಿನಾಲೆಯಲ್ಲಿ ಗ್ರುಪ್ ಬಿ ವಿಭಾಗದಲ್ಲಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಸಿದ್ಧೇಶ್ವರ ಚಂಡಿಗ ಬಳಗವು ಪ್ರಥಮ ಸ್ಥಾನ ಪಡೆದು ೨೧ ಸಾವಿರ ರೂ. ನಗದು ಬಹುಮಾನ ಪಡೆಯಿತು.
ಅಕ್ಕೋಳ ಗ್ರಾಮದ ಶಿವಪ್ರತಿಷ್ಠಾನವು ಎರಡನೇಯ ಸ್ಥಾನ ಪಡೆದು ೧೫ ಸಾವಿರ ನಗದು ಬಹುಮಾನ ಮತ್ತು ಕಸನಾಳ ಗ್ರಾಮದ ಪ್ರದೀಪ ಸುತಾರ ಮತ್ತು ತಂಡವು ಮೂರನೇಯ ಸ್ಥಾನ ಪಡೆದು ೧೦ ಸಾವಿರ ರೂ. ನಗದು ಬಹುಮಾನ ಪಡೆದರು.
ಗ್ರೂಪ್ ಎ ವಿಭಾಗದಲ್ಲಿ ಸ್ಥಳೀಯ ನೃತ್ಯಸಭಾ ಭರತ ನಾಟ್ಯಂ ಸಂಘವು ಪ್ರಥಮ ಸ್ಥಾನ ಪಡೆದು ೧೧ ಸಾವಿರ ರೂ., ಭಿವಶಿ ಗ್ರಾಮದ ವೇದಿಕಾ ಡೋಂಗರೆ ಮತ್ತು ತಂಡವು ದ್ವಿತೀಯ ಸ್ಥಾನ ಪಡೆದು ೭ ಸಾವಿರ ರೂ. ಮತ್ತು ಸ್ಥಳೀಯ ಪಲ್ಲವಿ ಖೋರಡಗೆ ತೃತೀಯ ಸ್ಥಾನ ಪಡೆದು ೫ ಸಾವಿರ ರೂ. ನಗದು ಬಹುಮಾನ ಪಡೆದರು.
ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಕ್ಷೇತ್ರವಾರು ಸ್ಪರ್ಧೆಗಳು ನಡೆದು ಅವುಗಳಲ್ಲಿಯ ವಿಜೇತರು ಗ್ರಾö್ಯಂಡ್ ಫಿನಾಲೆಗೆ ಆಯ್ಕೆಗೊಂಡಿದ್ದರು. ವಿಜೇತರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಜೋತಿಪ್ರಸಾದ ಜೊಲ್ಲೆ, ಡಾ. ವರ್ಷಾ ಪಾಟೀಲ, ಮತ್ತು ಗಣ್ಯರು ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಥನಾಡಿ ‘ಕಳೆದ ೧೧ ವರ್ಷಗಳಿಂದ ಕ್ಷೇತ್ರದಲ್ಲಿ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವುದೊಂದಿಗೆ ಜೊಲ್ಲೆ ಗ್ರುಪ್ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತ ಸಮಾಜೋಪಯೋಗಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಟ್ಯಾಲೆಂಟ್ ಸ್ಪರ್ಧೆಯನ್ನು ಆಯೋಜಿಸಿ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸುವುದೊಂದಿಗೆ ಪ್ರತಿಯೊಬ್ಬರಲ್ಲಿಯ ಪ್ರತಿಭೆಗಳನ್ನು ಹೊರತರುವ ಕಾರ್ಯ ಮಾಡಲಾಗಿದೆ. ಇದರ ಪರಿಣಾಮವಾಗಿ ಸಾವಿರಾರು ಪ್ರತಿಭೆಗಳು ಹೊರಬಂದು ತಮ್ಮ ಪ್ರತಿಭೆಗಳನ್ನು ಹೊರಹಾಕಿದರು’ ಎಂದರು.
ಉದ್ಯಮಿ ವೃಷಭ ಜೈನ, ಕನೇರಿಯ ಜನನಿ ಐವಿಎಫ್ ಕೇಂದ್ರದ ಸಂಚಾಲಕಿ ಡಾ, ವರ್ಷಾ ಪಾಟೀಲ ಮಾತನಾಡಿದರು. ಅಂತಿಮ ಸ್ಪರ್ಧೆಯಲ್ಲೂ ವಿವಿಧ ವಿಶೇಷ ಕಲಾವಿದರು ತಮ್ಮ ಪ್ರತಿಭೆಗಳನ್ನು ಸಾದರಪಡಿಸಿ ನೋಡುಗರ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರು.
ಈ ಸಂದರ್ಭದಲ್ಲಿ ಸಂಶದ ಅಣ್ಣಾಸಾಹೇಬ ಜೊಲ್ಲೆ, ಜೋತಿಪ್ರಸಾದ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಖಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾದ್ಯಕ್ಷ ಪವನ ಪಾಟೀಲ, ಸಂಚಾಲಕ ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಗುಂದೇಶಾ, ನಗರಸಭೆ ಸದಸ್ಯರು, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಮೊದಲಾದವರು ಸಹಿತ ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ