*ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಸಾವಿರ ಸಮಸ್ಯೆಗಳಲ್ಲಿ ಒಂದಾದ ಮುಖ್ಯಮತ್ರಿ ಸಿದ್ದರಾಮಯ್ಯನವರ ಮೈಸೂರಿನ 3,500 ಕೋಟಿ ಮೂಡಾ ಹಗರಣ ಬೆಳಕಿಗೆ ಬಂದ ಮೇಲೆ 14 ಸೈಟ್ ವಾಪಸ್ ಪಡೆದು ಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ಸಾವಿರ ದಿನಗಳ ಭ್ರಷ್ಟಾಚಾರ ಬೆಳಕಿಗೆ ಬಂದಿದೆ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾಗೃಹದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಹಾಗೂ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ,ಕಾಂಗ್ರೆಸ್ ಸರ್ಕಾರ1000 ದಿನಗಳ ಯಶಸ್ವಿಯಾಗಿ ಕಳೆದಿದೆ ಎಂದು ಸಮಾವೇಶ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ವಾಲ್ಮೀಕಿ ಹಗರಣ : 178 ಕೋಟಿ ನಿಗಮದ ಹಣವನ್ನು 700 ಖಾತೆಗಳಿಗೆ ವರ್ಗಾವಣೆ ಸಚಿವ ನಾಗೇಂದ್ರ ರಾಜೀನಾಮೆ,ವಕ್ಫ್ ಮಂಡಳಿಯಿಂದ 4 ಕೋಟಿ ಆಕ್ರಮ ಹಣ ವರ್ಗಾವಣೆ, 11 ಇಲಾಖೆ, 9 ನಿಗಮಗಳಲ್ಲಿ 42 ಕೋಟಿ ದುರುಪಯೋಗಯೋಗವಾಗಿದೆ ಎಂದರು.
ಅಬಕಾರಿ ಹಗರಣ : 700 ಕೋಟಿ (ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ಒತ್ತಡ)
ಇಂಧನ ಖಾತೆಯಲ್ಲಿ ಹಗರಣ : 15,500 ಸ್ಮಾರ್ಟ ಮೀಟರ್ ಹಗರಣ (ಸಚಿವ ಕೆ.ಜೆ. ಜಾರ್ಜ ಇಂಧನ ಖಾತೆ ಸಚಿವ),ಹೆಸ್ಕಾಂ ನಲ್ಲಿ 90 ಕೋಟಿ ಟ್ರಾನ್ಸಫಾರ್ಮರ ಹಗರಣ,ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 617 ಕೋಟಿ,ಎಸ್ಸಿಎಸಪಿ ಮತ್ತು ಟಿಎಸ್ಪಿ 11,144.00 ಕೋಟಿ ಹಣ ದುರ್ಬಳಿಕೆ ರೈತರ, ಮಠಗಳ ಜಮೀನುಗಳನ್ನು ವಕ್ಫ ಬೋರ್ಡ ಆಸ್ತಿ ಎಂದು ನಮೂದಿಸಿರುವುದು.ಬೆಂಗಳೂರಿನಲ್ಲಿ 1261 ಕೋಟಿ ಸೈಬರ ವಂಚನೆ ಆಗಿರುವುದು ಕಾಂಗ್ರೇಸ್ ಸರ್ಕಾರದ ಆಡಳಿತ ಜನರಿಗೆ ಎದ್ದು ಕಾಣುತ್ತಿದೆ ಎಂದರು.
ಆರ್.ಸಿ.ಬಿ. ಗೆಲುವಿನ ವಿಜಯೋತ್ಸವದ ಕಾಲ್ತುಳಿದಲ್ಲಿ 11 ಯುವಕರ ಸಾವು,ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 15% ಮೀಸಲಾತಿ.2.5 ವರ್ಷಗಳಲ್ಲಿ ರಾಜ್ಯದಲ್ಲಿ 2422 ರೈತರು ಸಾವಿಗೆ ಶರಣಾಗಿದ್ದಾರೆ. ಹಿಂದು ಧಾರ್ಮಿಕ ಕ್ಷೇತ್ರಗಳ ವಿರುದ್ಧ ಷಡ್ಯಂತ್ರ : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಸಂವಿಧಾನ ವಿರೋಧಿ ಸರ್ಕಾರ ,ವಿಧಾನಸೌಧದಲ್ಲಿ ಮತಾಂಧನಿಂದ ಪಾಕಿಸ್ಥಾನ ಜಿಂದಾಬಾದ ಘೋಷಣೆ ಕೂಡಿದರೂ ಯಾವುದೇ ಕ್ರಮ ಇಲ್ಲ ಎಂದರು.

ಕಾನೂನು ಸುವ್ಯವಸ್ಥೆ : ಬೈಕ್ ಕಳ್ಳತನ, ಡ್ರಗ್ಸ್ ಮಾಫೀಯಾ, ಗಾಂಜಾ ಹಿಂದೂ ಆಚರಣೆಗಳಿಗೆ ಅಡ್ಡಿ, ಹಿಂದು ಕಾರ್ಯಕರ್ತರ ಹತ್ಯೆ ಹಾಗೂ ಸುಳ್ಳು ಕೇಸ್ ದಾಖಲಿಸಿ ಬಂಧಿಸುವುದು.
ಬೆಲೆ ಏರಿಕೆ : ಗಗನಕ್ಕೆ ತಲುಪಿದ ಎಲ್ಲ ದಿನಶಿ ವಸ್ತುಗಳ ಬೆಲೆ
ಮಹಿಳೆಯರ ಮೇಲೆ ದೌರ್ಜನ್ಯ
ಬೆಳಗಾವಿ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಮಂಗಳೂರಿನ ವಿದ್ಯಾರ್ಥಿನಿಯ ಮೇಲೆ ಅಸಿಡ್ ದಾಳಿ, ಗಂಗಾವತಿಯಲ್ಲಿ ವಿದೇಶಿ ಮಹಿಳೆಯರ ಮೇಲೆ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ ಮತಾಂಧನಿಂದ ಹುಬ್ಬಳ್ಳಿಯಲ್ಲಿ ಹಿಂದು ಯುವತಿ ನೇಹಾ ಹಿರೇಮಠ ಕೊಲೆ,ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಮಹಿಳೆಯನ್ನು ಥಳಿಸಿರುವುದು,ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ (ಮುಖ್ಯಮಂತ್ರಿಯ ತವರು ಕ್ಷೇತ್ರ ವರುಣಾದಲ್ಲಿ ನಡೆದ ಘಟನೆ),ರೈತ ವಿರೋಧಿ ಸರ್ಕಾರ ರೈತರ ಬಿಪಿಎಲ್ ಕಾರ್ಡನಿಂದ ಎಪಿಎಲ್ಗಳಿಗೆ ವರ್ಗಾವಣೆ ಬಡ ರೈತರ ಅನ್ನ ಕಸಿದುಕೊಳ್ಳುವ ಭಾಗ್ಯ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದ ಕಿಸಾನ್ ಸಮ್ಮಾನ ನಿಧಿಯೊಂದಿಗೆ 4 ಸಾವಿರ ರೂಪಾಯಿ ರಾಜ್ಯ ಬೆಜೆಪಿ ಸರ್ಕಾರ ಸೇರಿಸಿ ಕೊಡಲಾಗುತ್ತಿತ್ತು ಅದನ್ನು ತಡೆದಿದ್ದಾರೆ. ರೈತ ಮಕ್ಕಳ ವಿದ್ಯಾನಿಧಿ ನಿಲ್ಲಿಸಿರುವುದು,ಬರ ಪರಿಹಾರ ವಿಳಂಬ,ಮುಸ್ಲೀಂ ತುಷ್ಠೀಕರಣ,ಓಬಿಸಿ, ದಲಿತರ ಸಾಲದ ಬಡ್ಡಿ ಮನ್ನಾವೂ ಇಲ್ಲ ಅನುದಾನವೂ ಇಲ್ಲ , ಅಲ್ಪಸಂಖ್ಯಾತರ ಸಾಲದ ಬಡ್ಡಿ ಮನ್ನಾ ಮಾಡುವ ಮೂಲಕ ಒಲೈಕೆ ರಾಜಕಾರಣ,ಯುವಕರಿಗೆ ವಂಚನೆ : ಯುವ ಜನತೆಯ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಸರ್ಕಾರ, 2 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಯುವಜನತೆಯ ಬದುಕಿನೊಂದಿಗೆ ಸರ್ಕಾರ ಚಲ್ಲಾಟವಾಡುತ್ತಿದೆ.,ಸರ್ಕಾರಿ ಶಾಲೆಗಳು ರಿಪೇರಿ ಇಲ್ಲದೇ ಜೀವವನ್ನು ಕೈಯಲ್ಲಿ ಹಿಡಿದು ಓದುವ ಪರಿಸ್ಥಿತಿ ಮಕ್ಕಳಿಗೆ ಬಂದೊದಗಿದೆ. ಸಾವಿರಾರು ಸಂಖ್ಯೆಯಲ್ಲಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಜಾರಿ ಮಾಡಿದ ಅವೈಜ್ಞಾನಿಕ ಭಾಗ್ಯಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ.ಒಟ್ಟಿನಲ್ಲಿ ಹಗರಣಗಳ ಸರಮಾಲೆ , ದಲಿತರ ಹಣ ದುರ್ಬಳಿಕೆ, ದಲಿತ ವಿರೋಧಿ, ಹಿಂದೂ ವಿರೋಧಿ, ರೈತ ವಿರೋಧಿ, ಯುವಕರ , ವೃದ್ಧರ, ಮಹಿಳಾ ವಿರೋಧಿ,ದಲಿತ ವಿರೋಧಿ, ಅತ್ಯಾಚಾರ, ಗಲಭೆ, ಲೂಟಿ, ಕೊಲೆಗಳು, ಆತ್ಮಹತ್ಯೆಗಳ, ದಾದಾಗಿರಿ, ಬೆಲೆ ಏರಿಕೆ, ಸಂಪನ್ಮೂಲಗಳ ಹಗಲು ದರೋಡೆ, ಬೃಷ್ಠಾಚಾರ, ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟದಲ್ಲಿ ಕಾಲ ಹರಣ ಮಾಡುತ್ತಿರುವ ಲೋಟಿ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳ ಸ್ಥಗಿತ, ಹೇಗೆ ಸಾವಿರಾರು ಹಗರಣಗಳೇ ಇವರ 1000 ದಿನದ ಸಾಧನೆ,ರಾಜ್ಯ ಕಾಂಗ್ರೇಸ ಸರ್ಕಾರದ ಸಾಧನೆಯ ಮುಖಪುಟ,ಅನುದಾನ ಗುಳುಂ,ಹಳ್ಳ ಹಿಡಿದ ನೀರಾವರಿ ಯೋಜನೆ,ರಸ್ತೆಗಳು ಗುಂಡಿಮಯ,ಎಗ್ಗಿಲ್ಲದೆ ನಡೆಯುತ್ತಿದೆ ಅಪರಾಧ ಕೃತ್ಯ,ಕೈದಿಗಳಿಗೆ ರಾಜಾತಿಥ್ಯ,ರೈತರು, ಯುವಕರು, ಸರ್ಕಾರಿ ನೌಕರರು ಬೀದಿಗೆ,ದಿನ ಬಳಕೆ ವಸ್ತುಗಳು ಬೆಲೆ ಗಗನಕ್ಕೆ,ಸಾಲದ ಹೊರೆ,ಹೆಚ್ಚಿದ ರೈತರ ಆತ್ಮಹತ್ಯೆಅಭಿವೃದ್ಧಿ ಶೂನ್ಯ,ಶಾಲೆಗಳು ಪಾಳು ಬಿದ್ದಿವೆ
ನೇಮಕಾತಿಗಳು ಇಲ್ಲ,ಮಹಿಳೆಯರಿಗೆ ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ ಎಂದರು.
ಯಕ್ಸಂಬಾ ಪಟ್ಟಣದಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್ ಪಕ್ಷದ 1000 ದಿನಗಳ ಆಡಳಿತ ಕುರಿತು ಕರ ಪತ್ರ ಬಿಡುಗಳಡೆಗೊಳಿಸಿದರು.



