Karnataka NewsLatest

ಯಡಿಯೂರಪ್ಪನವರ ಆ ಮಾತಿನಿಂದ ಆಕೆಗೆ ಶಾಕ್ ಆಗಿದೆಯಂತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ಧಾರಾವಾಹಿಯಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ವೀಡಿಯೋ, ಆಡಿಯೋ ನಂತರ ಇದೀಗ ಸಿಡಿ ಲೇಡಿ ಪೊಲೀಸ್ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾಳೆ.

ಪತ್ರದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿರುವ ಅವಳು, ತನ್ನನ್ನೇ ಆರೋಪಿಯಂತೆ ವಿಚಾರಣೆ ನಡೆಸುತ್ತಿದ್ದು, ತಾನು ದೂರು ನೀಡಿರುವ ರಮೇಶ ಜಾರಕಿಹೊಳಿ ಅವರನ್ನು 3 ಗಂಟೆ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಲಾಗಿದೆ ಎಂದು ಆಕ್ಷೇಪ್ ವ್ಯಕ್ತಪಡಿಸಿದ್ದಾಳೆ.

ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಬೇಕಾದ ತಂತ್ರ ರೂಪಿಸಲಾಗಿದೆ. ಪೊಲೀಸರೇ ಸಾಕ್ಷಿಗಳನ್ನು ನಾಶಪಡಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾಳೆ.

ಇದೆಲ್ಲದರ ಜೊತೆಗೆ ಯಡಿಯೂರಪ್ಪ ಅವರು ಆಡಿದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ಅದರಿಂದ ನನಗೆ ಶಾಕ್ ಆಗಿದೆ ಎಂದಿದ್ದಾಳೆ.

Home add -Advt

ರಮೇಶ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಂದರೆ ಅವರ ಅಧೀನದಲ್ಲಿರುವ ಎಸ್ಐಟಿ ಹೇಗೆ ತನಿಖೆ ನಡೆಸಬಹುದು. ಮುಖ್ಯಮಂತ್ರಿಯವರ ಈ ಮಾತು ತನಿಖೆಯ ಮೇಲೆ ಪರಿಣಾಮ ಬೀರಲಿದೆ. ಈ ಮಾತು ತನಿಖೆ. ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಅವಳು ಬರೆದಿದ್ದಾಳೆ.

ಸೋಮವಾರ ರಮೇಶ ಜಾರಕಿಹೊಳಿ ಮತ್ತು ಸಿಡಿ ಲೇಡಿ ಇಬ್ಬರನ್ನೂ ಎಸ್ಐಟಿ ವಿಚಾರಣೆಗೆ ಕರೆದಿದೆ. ಪ್ರಕರಣ ಯಾವ ತಿರುವುದನ್ನು ಪಡೆಯಲಿದೆ ಕಾದು ನೋಡಬೇಕಿದೆ.

ಸಿಡಿ ಯುವತಿಯಿಂದ ಪೊಲೀಸ್ ಆಯುಕ್ತರಿಗೆ ಪತ್ರ

ಹನಿಟ್ರ್ಯಾಪ್ ಬಗ್ಗೆ ಡಿ.ಸುಧಾಕರ್ ಬಾಯ್ಬಿಟ್ಟ ಸತ್ಯವೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button