Sports

*ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಶಿಖರ್ ಧವನ*

ಪ್ರಗತಿವಾಹಿನಿ ಸುದ್ದಿ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ಪ್ರಕಟಿಸಿರುವ ಧವನ್, ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯೊಂದಿಗೆ ನನ್ನ ಕ್ರಿಕೆಟ್ ಪ್ರಯಾಣದ ಈ ಅಧ್ಯಾಯ ಮುಗಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ವೃತ್ತಿಜೀವನದುದ್ದಕ್ಕೂ ಅಚಲ ಬೆಂಬಲ ನೀಡುತ್ತ ಬಂದಿರುವ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದರಿಂದ ಟೀಮ್ ಅಭಿಮಾನಿಗಳು ಶಾಕ್‌ ಗೆ ಒಳಗಾಗಿದ್ದಾರೆ.

ಭಾರತಕ್ಕಾಗಿ ಆಡುವ ಕನಸಿತ್ತು ಸಾಧಿಸಿದೆ. ನನ್ನ ಈ ಪ್ರಯಾಣದಲ್ಲಿ ನನ್ನ ಕುಟುಂಬ. ತರಬೇತುದಾರರಾದ ದಿವಂಗತ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ, ಅಭಿಮಾನಿಗಳ ಕೊಡುಗೆ ಸ್ಮರಣೀಯ. ಕ್ರಿಕೆಟ್ ತಂಡದ ಮೂಲಕ ನನಗೆ ಮತ್ತೊಂದು ಕುಟುಂಬ, ಹೆಸರು, ಖ್ಯಾತಿ ಮತ್ತು ಅಭಿಮಾನಿಗಳ ಪ್ರೀತಿಯೂ ಲಭಿಸಿತು ಎಂದು ಭಾವುಕರಾಗಿ ಹೇಳಿದ್ದಾರೆ. ಆದರೂ ಧವನ್ ಐಪಿಎಲ್‌ನಲ್ಲಿ ಆಡಲಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button