Kannada NewsKarnataka NewsLatest

*ಅರಣ್ಯವಾಸಿಗಳಿಂದ ಪರಿಸರ ಜಾಗೃತಿ: ಲಕ್ಷಗಿಡ ನೆಟ್ಟು ವನಮಹೋತ್ಸವ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ 32 ವರ್ಷ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ “32 ವರ್ಷ ಹೋರಾಟ- ಒಂದು ಲಕ್ಷ ಗಿಡ’’ ನೆಡುವ ಮೂಲಕ ಜಿಲ್ಲೆಯಾದ್ಯಂತ ವನಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಯ್ಕ ಅವರು ಶಿರಸಿಯಲ್ಲಿ ಒಂದು ಲಕ್ಷಗಿಡ ಎಂಬ ವಿನೂತನ ರೀತಿಯ ವನಮಹೋತ್ಸವ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರುಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯವಾದ ಜಲವಿದ್ಯುತ್ ಯೋಜನೆ, ಸಾರಿಗೆ, ಬೆಂಕಿ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿಅರಣ್ಯ ಭೂಮಿಯನ್ನೇ ಅವಲಂಬಿಸಿದ ಅರಣ್ಯವಾಸಿಗಳು ಜಿಲ್ಲಾದ್ಯಂತ ಅರಣ್ಯ ಇಲಾಖೆಯ ಸಹಕಾರವಿಲ್ಲದೇ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ 10,571 ಚದರ್.ಕೀ.ಮೀ ಪ್ರದೇಶ ಹೊಂದಿದ್ದು ಅವುಗಳಲ್ಲಿ 8,500 ಚದರ್.ಕೀ.ಮೀ ಅರಣ್ಯ ಪ್ರದೇಶವಾಗಿದೆ. ಜಿಲ್ಲೆಯ ಜನಸಂಖ್ಯೆಯ ಸಾಂಧ್ರತೆಯ ಪ್ರಮಾಣ ಪ್ರತಿ ಸ್ಕ್ಯೇರ್ ಕೀ.ಮೀ ಗೆ 202 ಜನ ಇದ್ದರೆ, ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯಸಾಂಧ್ರತೆಗಿಂತ 10 ಪಟ್ಟು ಹೆಚ್ಚಾಗಿ ಇದ್ದರೂ ಗಿಡ, ಮರ ಪ್ರಮಾಣ ಕಡೆಮೆ ಇರುವುದು ಬೇಸರದ‌ ಸಂಗತಿ. ಪ್ರತಿವರ್ಷ ಅರಣ್ಯ ಇಲಾಖೆಯು ನೆಡುವ ಗಿಡಗಳ ಸಂಖ್ಯೆ ಪ್ರಕಟಿಸುತ್ತದೆ ಹೊರತು ನೆಟ್ಟಂತ ಗಿಡಗಳ ರಕ್ಷಣೆ ಆಗಿರುವ ಕುರಿತು ಯಾವುದೇ ದಾಖಲೆಗಳು ಇಲ್ಲ ಎಂದರು.

ಕಳೆದ ವರ್ಷ ತೆಗೆದ ಹೊಂಡಕ್ಕೆ ಈ ವರ್ಷ ಗಿಡ ನೆಡುವ ನೀತಿ ಅರಣ್ಯ ಇಲಾಖೆಯದ್ದಾಗಿದ್ದು ಇವರ ವನಮೋತ್ಸವ ಯೋಜನೆ ಬೋಗಸ್ ಯೋಜನೆಯಾಗಿದೆ ಎಂದು ಆಕ್ರೋಶ ಅವ್ಯಕ್ತಪಡಿಸಿದರು. ಅಲ್ಲದೇ ಜಿಲ್ಲೆಯ ಪರಿಸರ ಮತ್ತು ಮಣ್ಣಿಗೆ ಮಾರಕವಾಗಿರುವ ಗಿಡ, ಮರಗಳನ್ನು ಅರಣ್ಯ ಇಲಾಖೆ ನೆಡುವ ಅವೈಜ್ಞಾನಿಕ ಪದ್ಧತಿ ಬಿಡಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button