Kannada NewsKarnataka NewsLatest

*ಅಪಘಾತದಲ್ಲಿ ಸ್ನೇಹಿತ ಸಾವು; ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ಯುವಕ*

ಪ್ರಗತಿವಾಹಿನಿ; ಶಿವಮೊಗ್ಗ; ಸ್ನೇಹಿತನ ಸಾವಿನ ಸುದ್ದಿ ಕೇಳಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಬೈಕ್ ಅಪಘಾತದಲ್ಲಿ ಆನಂದ್ (30) ಎಂಬುವವರು ಮೃತಪಟ್ಟಿದ್ದರು. ಈ ವಿಷಯ ಕೇಳಿದ ಸ್ನೇಹಿತ ಸಾಗರ್ (22) ಶಾಕ್ ಆಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪ ನಡುವಿನ ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಅಪಘಾತದಲ್ಲಿ ಆನಂದ್ ಮೃತಪಟ್ಟಿದ್ದರು. ಆನಂದ್ ಬೈಕ್ ನಲ್ಲಿದ್ದ ನಟರಾಜ್ ಹಾಗೂ ಇನ್ನೊಂದು ಬೈಕ್ ನಲ್ಲಿದ್ದ ಜಾವಿದ್, ಮಲಿಕ್ ಎಂಬುವವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Home add -Advt

ತನ್ನ ಸ್ನೇಹಿತ ಆನಂದ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಸಾಗರ್ ಆಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆನಂದ್ ಹಾಗೂ ಸಾಗರ್ ಇಬ್ಬರೂ ಶಿಕಾರಿಪುರದ ಪುಣೇದಹಳ್ಳಿ ನಿವಾಸಿಗಳಾಗಿದ್ದರು. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button