Kannada NewsKarnataka NewsLatest

*ನವವಿವಾಹಿತೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ವಿವಾಹವಾಗಿದ್ದ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದಾಸನಕೊಡಿಗೆ ಗ್ರಾಮದಲ್ಲಿ ನಡೆದಿದೆ.

24 ವರ್ಷದ ಬಿ.ಯು.ಶಮಿತಾ ಆತ್ಮಹತ್ಯೆ ಮಾಡಿಕೊಂಡವರು. ಡೆತ್ ನೋಟ್ ಬರೆದಿಟ್ಟು ಶಮಿತಾ ನೇಣಿಗೆ ಕೊರಳೊಡ್ಡಿದ್ದಾಳೆ.

Home add -Advt

ಪ್ರೀತಿಸಿ 8 ತಿಂಗಳ ಹಿಂದೆ ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದರು. ಆದರೆ ಈಗ ಶಮಿತಾ ಏಕಾಏಕಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ಶಮಿತಾ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ತನಗೆ ಥೈರಾಯ್ಡ್ ಆರೋಗ್ಯ ಸಮಸ್ಯೆಯಿದೆ. ಅಲ್ಲದೇ ತನಗೆ ಒಂಟಿತನ ಕಾಡುತ್ತಿದೆ ಎಂದು ಬರೆದಿಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ವಿವಾಹವಾಗಿದ್ದ ಶಮಿತಾ ಈಗ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.


Related Articles

Back to top button