Latest

*ನವವಿವಾಹಿತೆ ಅನುಮಾನಾಸ್ಪದವಾಗಿ ಸಾವು*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಮದುವೆಯಾದ 14 ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

23 ವರ್ಷದ ಧನ್ಯಶ್ರೀ ಮೃತ ಮಹಿಳೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಮೂಲದ ಧನ್ಯಶ್ರೀಯನ್ನು ಶಿವಮೊಗ್ಗದ ಆರ್ ಎಂ ಎಲ್ ನಗರದ 26 ವರ್ಷದ ಚಂದ್ರಶೇಖರ್ ಜತೆ ಮದುವೆ ಮಾಡಲಾಗಿತ್ತು. 14 ತಿಂಗಳ ಹಿಂದಷ್ಟೇ ಶಿವಮೊಗ್ಗದ ವಾಸವಿ ಹಾಲ್ ನಲ್ಲಿ ಅದ್ದೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ಆದರೆ ಈಗ ಧನ್ಯಶ್ರೀ ಶವವಾಗಿ ಪತ್ತೆಯಾಗಿದ್ದಾಳೆ.

ಧನ್ಯಶ್ರೀ ಬಿ ಕಾಂ ಪದವೀಧರೆಯಾಗಿದ್ದಳು. ಚಂದ್ರಶೇಖರ್ ಎಸ್ ಎಸ್ ಎಲ್ ಸಿ ಓದಿದ್ದು, ಮದುವೆ, ಧಾರ್ಮಿಕ ಸಮಾರಂಭಗಳಲ್ಲಿ ವಾದ್ಯ ನುಡಿಸುತ್ತಿದ್ದ. ವಿದ್ಯಾಭ್ಯಾಸ, ಅಂತಸ್ತು, ಪರಸ್ಪರ ಆಲೋಚನೆಯಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಮದುವೆಯಾದಾಗಿನಿಂದಲೂ ಚಿಕ್ಕಪುಟ್ಟ ವಿಚಾರವಾಗಿಯೂ ಜಗಳವಾಗುತ್ತಿತ್ತು. ತವರು ಮನೆಯಲ್ಲಿ ಆರಾಮವಾಗಿ ಬೆಳೆದಿದ್ದ ಧನ್ಯಶ್ರೀಗೆ ಪತಿಯ ಆಲೋಚನೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗಿ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ.

ಪತಿ ಚಂದ್ರಶೇಖರ್ ಅತ್ತ ಸ್ನಾನಕ್ಕೆಂದು ತೆರಳಿದ್ದ ವೇಳೆ ಇತ್ತ ಧನ್ಯಶ್ರೀ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಚಂದ್ರಶೇಖರ್ ಹಾಗೂ ಮನೆಯವರ ವಿರುದ್ಧ ಧನ್ಯಶ್ರೀ ಕುಟುಂಬದವರು ವರದಕ್ಷಿಣೆ ಕಿರುಕುಳ, ಕೊಲೆ ಆರೋಪ ಮಾಡಿದ್ದಾರೆ. ಪತಿಯೇ ಮಾನಸಿಕವಾಗಿ ಕಿರುಕುಳ ಕೊಟ್ಟು ಕೊಲೆಗೈದಿದ್ದಾಗಿ ಆರೋಪಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

*ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ; ಗೋಕರ್ಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ತರಾಟೆ*

https://pragati.taskdun.com/h-d-kumaraswamybrahmana-samudayaclarification/

Related Articles

Back to top button