Kannada NewsKarnataka News

ಸುಳೇಭಾವಿ ಮಹಾತ್ಮೆ ಸಾರುವ ಕಿರುಚಿತ್ರ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟçದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾತ್ಮೆ ಸಾರುವ ಕಿರುಚಿತ್ರ ನಿರ್ಮಾಣವಾಗುತ್ತಿದ್ದು, ಈ ಮೂಲಕ ದೇವಿಯ ಶಕ್ತಿ ಇನ್ನಷ್ಟು ಪಸರಿಸಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಗಜಾನನ ನಾಯ್ಕ ಹೇಳಿದರು.
ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಶ್ರೀ ಶಿವಶೋಭಾ ಸಿನಿ ಫ್ಯಾಕ್ಟರಿ ನಿರ್ಮಿಸುತ್ತಿರುವ ಜಾತ್ರಿ ಬಂತು ಎಂಬ ಕಿರುಚಿತ್ರ ಚಿತ್ರೀಕರಣಕ್ಕೆ ಕ್ಲ್ಯಾಪ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಅತ್ಯಂತ ಜರುಗಲಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ವಿನೂತನ ಪ್ರಯೋಗವಾಗಲಿದೆ ಎಂದು ಹೇಳಿದರು.
ಕಲ್ಪವೃಕ್ಷ, ಕಾಮಧೇನು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವರ್ಷದ ಜಾತ್ರೆಯಂತೂ ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ. ಜಾತ್ರಿ ಬಂತು ಎಂಬ ಕಿರುಚಿತ್ರ ನಿರ್ಮಾಣವಾಗುತ್ತಿರುವುದು ಮೊದಲ ಚಿತ್ರವಾಗಿದೆ. ಗ್ರಾಮದ ಯುವಕರು ಸೇರಿ ಮಾಡಿರುವ ಕಿರುಚಿತ್ರ ಯಶಸ್ವಿಯಾಗಲಿ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕಿರಣಸಿಂಗ್ ರಜಪೂತ ಮಾತನಾಡಿ, ದೇವಿಯ ಮಹಿಮೆ ಸಾರುವ ಕಿರುಚಿತ್ರ ಯಶಸ್ವಿಯಾಗಲಿದೆ. ಸಿನಿಮಾ ಮಾದರಿಯಲ್ಲಿಯೇ ನಿರ್ಮಾಣವಾಗುತ್ತಿರುವ ಈ ಚಿತ್ರ ಯಶಸ್ವಿಯಾಯಾಗಲಿ. ಸ್ಥಳೀಯ ಕಲಾವಿದರು ಅಭಿನಯಿಸಿದ ಈ ಚಿತ್ರ ಮಾದರಿಯಾಗಿ ಹೊರ ಹೊಮ್ಮಲಿ. ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ತಾಪಂ ಸದಸ್ಯ ಬಸನಗೌಡ ಹುಂಕರಿಪಾಟೀಲ ಕ್ಯಾಮರಾ ಚಾಲನೆ ನೀಡಿದರು. ಬಿಜೆಪಿ ಮುಖಂಡ ಭೀಮಶಿ ಭರಮನ್ನವರ ಸ್ಕ್ರಿಪ್ಟ್ ಪೂಜೆ ನೆರವೇರಿಸಿದರು. ಪತ್ರಕರ್ತ ಭೈರೋಬಾ ಕಾಂಬಳೆ ಅವರ ಕತೆ, ಚಿತ್ರಕತೆ, ಸಂಭಾಷಣೆ, ಚಂದೂರ ಮಾರುತಿ ನಿರ್ದೇಶಿಸಿದ, ಜೀವಾ ಪ್ರಸನ್ನ ಅವರ ಛಾಯಾಗ್ರಹಣ ಹೊಂದಿರುವ ಕಿರುಚಿತ್ರದಲ್ಲಿ ಕಲಾವಿದರಾದ ಬಾಬಾಸಾಹೇಬ ಕಾಂಬಳೆ, ಸ್ನೇಹಾ ನಾಗನಗೌಡ, ಸಮೃದ್ಧ ಕಳಸಪ್ಪಗೋಳ, ಬಾಲರಾಜ ಭಜಂತ್ರಿ ಅಭಿನಯಿಸಿದ್ದಾರೆ.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ, ಮುಖಂಡರಾದ ನಾನಪ್ಪ ಪಾರ್ವತಿ, ಲಕ್ಷ್ಮಣ ಯಮೋಜಿ, ದ್ಯಾಮಣ್ಣ ಮುರಾರಿ, ಅಣ್ಣಪ್ಪ ಪಾಟೀಲ, ಮಹೇಶ ಸುಗಣೆನ್ನವರ, ಗಣಪತಿ ಹೊಸಮನಿ, ಕಲ್ಲಪ್ಪ ರಾಗಿ, ವಿಠ್ಠಲ ಬಂಡೀಗಣಿ, ಕಲ್ಲಪ್ಪ ರಾಗಿ, ಮುರುಗೇಶ ಹಂಪಿಹೊಳಿ, ಶಶಿಕಾಂತ ಸಂಗೊಳ್ಳಿ, ನಿಂಗಪ್ಪ ಚೌಗಲೆ, ಮಾರುತಿ ರವುಳಗೌಡ್ರ, ಕಲ್ಮೇಶ ಪೂಜಾರಿ ಸೇರಿದಂತೆ ಅರ್ಚಕರು, ಗ್ರಾಮಸ್ಥರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button