Kannada News
2025ರಲ್ಲಿ ಶ್ರೀ ರಾಮ ಮಂದಿರ ಪೂರ್ಣ ; ಗೋಪಾಲ ನಾಗರಕಟ್ಟೆ, ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ವಿವರಣೆ

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ –
ಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ೩೨೦೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ೨೦೨೫ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟಿçÃಯ ಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯೂ ಆಗಿರುವ ಗೋಪಾಲ ನಾಗರಕಟ್ಟೆ ಹೇಳಿದರು.


ಶ್ರೀ ರಾಮ ಮಂದಿರವು ತಲಾ ೨೦ ಅಡಿಯ ಮೂರು ಅಂತಸ್ತುಗಳನ್ನು ಒಳಗೊಳ್ಳಲಿದೆ. ನೆಲ ಅಂತಸ್ತಿನಲ್ಲಿ ಶ್ರೀ ರಾಮನ ಬಾಲ್ಯದ ಮೂರ್ತಿ, ಜತೆಗೆ ಲಕ್ಷ್ಮಣ, ಭರತ, ಶತ್ರುಘ್ನರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಎರಡನೇ ಅಂತಸ್ತಿನಲ್ಲಿ ಶ್ರೀ ರಾಮ ದರ್ಬಾರ್ ಇರಲಿದ್ದು, ಇದರಲ್ಲಿ ರಾಮ, ಸೀತೆ, ಹನುಮಂತ, ಲಕ್ಷö್ಮಣ, ಭರತ, ಶತ್ರುಘ್ನರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಮೂರನೇ ಅಂತಸ್ತಿನಲ್ಲಿ ದೇವರ ಮೂರ್ತಿಗಳು ಇರುವುದಿಲ್ಲ ಎಂದು ಹೇಳಿದರು.
ಮಂದಿರಕ್ಕೆ ನೀಡಲಾದ ೭೫ ಎಕರೆ ಜಾಗದ ಪೈಕಿ ೬.೫ ಎಕರೆ ಜಾಗದಲ್ಲಿ ಮಂದಿರ ಹಾಗೂ ಉಳಿದ ಜಾಗವು ಆವರಣವಾಗಿರಲಿದೆ. ಆವರಣದಲ್ಲಿ ಗಿಡಗಳನ್ನು ಬೆಳೆಸುವ ಯೋಜನೆಯಿದೆ ಎಂದು ಹೇಳಿದರು.
೪೫ ಅಡಿ ಆಳ
ರಾಮ ಮಂದಿರ ನಿರ್ಮಾಣವಾಗುತ್ತಿರುವ ಜಾಗವು ಸರಯೂ ನದಿಯ ತೀರವಾಗಿದ್ದು, ಇಲ್ಲಿನ ಮಣ್ಣು ಸಣ್ಣ ಮರಳಿನಿಂದ ಮಿಶ್ರಿತವಾಗಿದೆ. ರಾಮ ಮಂದಿರವು ೧೦೦೦ ವರ್ಷಗಳ ಕಾಲ ಬಾಳಿಕೆ ಬರುವಂತಿರಬೇಕು ಎಂಬುದು ನಮ್ಮ ಯೋಜನೆ. ಇಂಥಹ ಮೃದುವಾದ ಮಣ್ಣಿನಲ್ಲಿ ಮಂದಿರ ನಿರ್ಮಾಣ ಬಹಳ ಕಾಲ ಬಾಳಿಕೆ ಬರುವುದಿಲ್ಲ ಎಂಬ ಕಾರಣಕ್ಕೆ ಮಂದಿರ ನಿರ್ಮಿಸುತ್ತಿರುವ ೬.೫ ಎಕರೆ ಜಾಗದಲ್ಲಿ ೪೫ ಅಡಿ ಆಳಕ್ಕೆ ಮಣ್ಣು ತೆರವುಗೊಳಿಸಿ ಹಳ್ಳ ತೋಡಲಾಯಿತು. ಬಳಿಕ ಈ ಹಳ್ಳದಲ್ಲಿ ಕಾಂಕ್ರೀಟ್, ಉಕ್ಕು ಮತ್ತು ಫ್ಲೈ ಆಶ್‌ಗಳ ಮಿಶ್ರಣದ, ತಲಾ ೧ ಅಡಿಯ ಒಟ್ಟು ೪೮ ಪದರಗಳನ್ನು ಹಾಕಲಾಯಿತು. ಹೀಗೆ ನೆಲವನ್ನು ಗಟ್ಟಿಗೊಳಿಸಿದ ಬಳಿಕ ಅದರ ಮೇಲೆ ಕಟ್ಟಡ ನಿರ್ಮಾಣವಾಗುತ್ತಿದೆ.
ಮಂದಿರವು ೩೬೦ ಅಡಿ ಉದ್ದ, ೨೩೦ ಅಡಿ ಅಗಲ ಹಾಗೂ ೧೬೧ ಅಡಿ ಎತ್ತರವಿರಲಿದೆ. ಕಟ್ಟಡದ ಕಂಬಗಳಿಗೆ ಕರ್ನಾಟಕದ ಚಿಕ್ಕಬಳ್ಳಾಪುರ ಗ್ರಾನೈಟ್‌ಗಳನ್ನು ಬಳಸಲಾಗುತ್ತಿದ್ದು ಸಧ್ಯ ೧೭ ಸಾವಿರ ಗ್ರಾನೈಟ್ ಕಲ್ಲುಗಳನ್ನು ಅಯೋಧ್ಯೆಯಲ್ಲಿ ಸಂಗ್ರಹಿಸಲಾಗಿದೆ. ಇನ್ನೂ ಸುಮಾರು ೪೦ ಸಾವಿರ ಕಲ್ಲುಗಳು ಅಗತ್ಯವಿದೆ. ಗೋಡೆಗಳನ್ನು ರಾಜಸ್ತಾನದ ಬನ್ಸಿ ಪಹಾಡ್‌ನ ಕೆಂಪು ಕಲ್ಲುಗಳಿಂದ ನಿರ್ಮಿಸಲಾಗುತ್ತಿದೆ. ಖ್ಯಾತ ವಾಸ್ತು ಶಿಲ್ಪಿ ಚಂದ್ರಕಾಂತ ಸೋಮಪುರ ರಾಮ ಮಂದಿರದ ವಿನ್ಯಾಸ ಮಾಡಿದ್ದು, ಎಲ್‌ಎಂಡ್‌ಟಿ ನಿರ್ಮಾಣದ ಗುತ್ತಿಗೆ ಪಡೆದಿದೆ. ಟಾಟಾ ಇಂಜಿನಿಯರಿಂಗ್‌ನ ತಂತ್ರಜ್ಞರು ಮೇಲುಸ್ತುವಾರಿ ನಡೆಸಿದ್ದಾರೆ ಎಂದು ತಿಳಿಸಿದರು.
ವಿಐಪಿ, ವಿವಿಐಪಿ ಇಲ್ಲ
ಮಂದಿರದಲ್ಲಿ ಮೂರು ಹಂತದಲ್ಲಿ ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಒಟ್ಟು ಪ್ರದಕ್ಷಿಣೆ ಹಾಕಲು ಸುಮಾರು ಮುಕ್ಕಾಲು ಕಿಮೀ (೭೫೦ ಮೀ) ನಡೆಯಬೇಕು. ಅಲ್ಲದೇ ೨೫ ಸಾವಿರ ಜನರು ಏಕ ಕಾಲಕ್ಕೆ ಉಳಿದುಕೊಳ್ಳಬಹುದಾದ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು. ಮಂದಿರದಲ್ಲಿ ಶ್ರೀ ರಾಮನ ದರ್ಶನಕ್ಕೆ ವಿಐಪಿ, ವಿವಿಐಪಿ ಸಾಲುಗಳು ಇರುವುದಿಲ್ಲ. ಎಲ್ಲರೂ ಶ್ರೀ ರಾಮನ ಭಕ್ತರಾಗಿದ್ದು, ಎಲ್ಲರಿಗೂ ಒಂದೇ ಸರದಿ ಸಾಲು ಇರಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೃಷ್ಣ ಭಟ್, ಶ್ರೀಕಾಂತ ಕದಂ ಮೊದಲಾದವರು ಇದ್ದರು.
https://pragati.taskdun.com/politics/belagaviayudha-poojegopal-nagara-kattevhp/
https://pragati.taskdun.com/latest/ayudha-poojehindu-jagruta-samitiramesh-shinde/