Kannada NewsKarnataka NewsLatest

ವಂಚನೆ ಪ್ರಕರಣ ಬೇಧಿಸಿದ ಚಿಕ್ಕೋಡಿ ಪೊಲೀಸರು: 51 ATM ಕಾರ್ಡ್ ಸಹಿತ ವ್ಯಕ್ತಿ ಬಂಧನ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬರ ಎಟಿಎಂ ಪಾಸ್‌ವರ್ಡ್ ಪಡೆದು ಅವರ ಬ್ಯಾಂಕ್ ಖಾತೆಯಿಂದ ೩೭,೫೦೦ ರೂ. ಎಗರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಾಪುರ ಜಿಲ್ಲೆಯ ಹಾಥಕಣಗಲಾ ತಾಲೂಕಿನ ಸಾವರ್ಡೆ ನಿವಾಸಿ ಅಮೂಲ್ ದಿಲೀಪ್ ಸಖಟೆ (೩೦) ಬಂಧಿತ ಆರೋಪಿ. ಈತ ಚಿಕ್ಕೋಡಿ ತಾಲೂಕಿನ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಢಾಲೆ ಎಂಬುವವರು ಸೆ.೩ರಂದು ಎಟಿಎಂನಿಂದ ಹಣ ಪಡೆಯಲು ಹೋದಾಗ ಅವರಿಗೆ ಸಹಾಯ ಮಾಡುವ ನೆಪದಲ್ಲಿ ೩೭,೫೦೦ ರೂ. ವಿತ್‌ಡ್ರಾ ಮಾಡಿಕೊಂಡಿದ್ದ ಬಗ್ಗೆ ವಿಜಯಾ ಢಾಲೆ ಅವರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿತನಿಂದ ಬೇರೆಬೇರೆ ಜನರಿಗೆ ಮೋಸ ಮಾಡಿ ಪಡೆದ ೫೧ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಅಥಣಿ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ, ಬಾಗಲಕೋಟ ಹಾಗೂ ಮಹಾರಾಷ್ಟ್ರ ರಾಜ್ಯದ ಹಲವೆಡೆಗಳಲ್ಲಿ ಇದೇ ರೀತಿ ಅಪರಾಧ ಎಸಗಿದ ಬಗ್ಗೆ ಕಂಡು ಬಂದಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ, ಪಿಎಸ್ ಯಮನಪ್ಪ ಮಾಂಗ, ಸಿಬ್ಬಂದಿಗಳಾದ ಆರ್.ಎಲ್. ಶೀಳನವರ, ಎಂ.ಪಿ. ಸತ್ತಿಗೇರಿ, ಎಸ್.ಪಿ. ಗಲಗಲಿ ಆರೋಪಿ ಬಂಧನಕ್ಕೆ
ಕಾರ್ಯಾಚರಿಸಿದ್ದರು. ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

2025ರಲ್ಲಿ ಶ್ರೀ ರಾಮ ಮಂದಿರ ಪೂರ್ಣ ; ಗೋಪಾಲ ನಾಗರಕಟ್ಟೆ,  ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ವಿವರಣೆ

https://pragati.taskdun.com/belgaum-news/shri-ram-mandir-will-be-complete-in-2025-gopala-nagarkatte/

ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ಕಳುವು ಮಾಡಿದ್ದ ಅಂತಾರಾಜ್ಯ ಕಳ್ಳಿಯ ಬಂಧನ

https://pragati.taskdun.com/latest/interstate-lady-thievesarrestedbelagavisavadatti-police/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button