
ಪ್ರಗತಿವಾಹಿನಿ ಸುದ್ದಿ, ಶಿರಸಂಗಿ: ವಿಶ್ವಕರ್ಮ ಪೂಜಾ ಮಹೋತ್ಸವ ಅಂಗವಾಗಿ ಶಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ವಿಶ್ವಕರ್ಮ ಪ್ರತಿಷ್ಠಾನ ಶಿರಸಂಗಿ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಕಲಾ ಪ್ರದರ್ಶನ 2022 ಕ್ಕೆ ಬಾಗಲಕೋಟೆ ಶಾಸಕ ಡಾ. ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ಅರೆಮಾದನಹಳ್ಳಿ ಶಿವ ಸುದ್ನಾನಪೀಠದ ಪೂಜ್ಯರಾದ ಶಿವಸುಜ್ಞಾನ ಮಹಾಸ್ವಾಮಿಗಳು ಹಾಗೂ ಚಂದ್ರಶೇಖರ ಸ್ವಾಮಿಗಳು, ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ. ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಪಿ. ಬಿ ಬಡಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿತ್ರ ಕಲಾವಿದರು, ಶಿಲ್ಪಕಲಾವಿದರು, ಕಂಚು ಕಲಾವಿದರು, ಕಾಷ್ಟಶಿಲ್ಪ ಕಲಾವಿದರು, ಛಾಯಾಗ್ರಾಹಕರು ಸೇರಿದಂತೆ ಬಹುಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಿದ್ದಾರೆ.
88 ವರ್ಷಗಳ ಬಳಿಕ ಭರ್ತಿಯಾದ ವಾಣಿವಿಲಾಸ ಸಾಗರ: ಸಂಪದ್ಭರಿತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಎಂದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ