Karnataka News

*ವ್ಯಕ್ತಿತ್ವ ವಿಕಸನ ಹೆಸರಲ್ಲಿ ಗನ್ ತರಬೇತಿ: ಶ್ರೀರಾಮಸೇನೆಯ 27 ಕಾರ್ಯಕರ್ತರ ವಿರುದ್ಧ FIR*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿತ್ವ ವಿಕಸನದ ಹೆಸರಲ್ಲಿ ಶಿಬಿರ ಆಯೋಜಿಸಿ ಗನ್ ಟ್ರೇನಿಂಗ್ ನೀಡಿರುವ ಆರೋಪದಲ್ಲಿ ಶ್ರೀರಾಮಸೇನೆಯ 27 ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ಕೆಲದಿನಗಳ ಹಿಂದೆ ಶ್ರೀರಾಮಸೇನೆ ಕಾರ್ಯಕರ್ತರು ವ್ಯಕ್ತಿತ್ವ ವಿಕಸನ ಹೆಸರಲ್ಲಿ ತರಬೇತಿ ಶಿಬಿರ ಹೆಸರಲ್ಲಿ ಗನ್ ಟ್ರೇನಿಂಗ್ ನೀಡಿದ್ದಾರೆ. ಸೇನೆಯ ಮಾದರಿಯಲ್ಲಿ ಯಾವರೀತಿ ಗನ್ ಹಿಡಿಯಬೇಕು ಯಾವರೀತಿ ಫೈರ್ ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ನಿಂಗಪ್ಪ ಹೂಗಾರ ಎಂಬುವವರು ದೂರು ನೀಡಿದ್ದು, ದೂರಿನ ಮೇರೆಗೆ ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಂಗಾಧರ ಕುಲಕರ್ಣಿ ಸೇರಿದಂತೆ 27 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button