National

*ಶರಣಾದ ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು: ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಲ್ಲಿ ಶರಣಾಗತರಾದ 48 ನಕ್ಸಲರಿಗೆ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ. ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು ಮೂಡಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ 48 ನಕ್ಸಲರು ಶರಣಾಗತರಾಗಿದ್ದರು. ಶರಣದಾ ಎಲ್ಲಾ ನಕ್ಸಲರಿಗೂ ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ.

Home add -Advt

ಶರಣಾದ ನಕ್ಸಲರಿಗೆ ಮೆಟಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸಲಾಗಿದೆ. ಮೂರು ತಿಂಗಳ ಕಾಲ ಕಂಪನಿಯಲ್ಲಿ ನಕ್ಸಲರಿಗೆ ತರಬೇತಿ ನೀಡಲಾಗಿದ್ದು, ಬಳಿಕ ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗಿದೆ. 48 ನಕ್ಸಲರು ಮೆಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15000-20000 ರೂಪಯೈ ಸಂಬಳ ಪಡೆಯುತ್ತಿದ್ದಾರೆ.

ಬಾಂಬ್, ಬಂದೂಕು ಹಾದಿಯನ್ನು ತೊರೆದು ಮುಖ್ಯವಾಹಿನೆಗೆ ಬಂದ ನಕ್ಸಲರಿಗೆ ಪೊಲೀಸರು ಉದ್ಯೋಗ ಕೊಡಿಸುವ ಮೂಲಕ ನಕ್ಸಲರ ಜೀವನಕ್ಕೆ ಬೆಳಕು ನೀಡಿದ್ದಾರೆ.

Related Articles

Back to top button