EducationKannada NewsKarnataka NewsPolitics

*ವಸತಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ: ಅವಾಚ್ಯ ಶಬ್ದಗಳಿಂದ ಕ್ಲಾಸ್ ತೆಗೆದುಕೊಂಡ ಶಾಸಕ*

ಪ್ರಗತಿವಾಹಿನಿ ಸುದ್ದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಸ್ಥಳೀಯ ಶಾಸಕ ಹಂಪಯ್ಯ ನಾಯಕ್ ಏಕವಚದಲ್ಲೇ ಅವಾಚ್ಯ ಶಬ್ದಗಳಿಂದ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ. 

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸುವ ವೇಳೆ ಸ್ಥಳೀಯ ಶಾಸಕ ಹಂಪಯ್ಯ ನಾಯಕ್, ಅಧಿಕಾರಿಗಳನ್ನು ಏಕವಚದಲ್ಲೇ ಅವಾಚ್ಯ ಶಬ್ದಗಳಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ.‌

ನನ್ನ ನೀನು ಭೇಟಿಯಾಗಬಾರದಾ..?ದದ್ದಲ್ ಸಾಹೇಬ್ ಭೇಟಿಯಾದ್ರೆ ಆಯ್ತಾ..? ನೀ ಬಂದ ಟೈಮ್ ಗೆ ನಾನು ಇರಬೇಕಾ.. ನಾ ಬಂದ ಟೈಮ್ ಗೆ ನೀನು ಇರಬೇಕಾ… ನನ್ನ ನೀನು ಹುಡಕಬೇಕಾ… ನಿನ್ನ ನಾನು ಹುಡಕಬೇಕಾ ಹೇಳು…? ತಲೆ ಏನಾದರೂ ಐತಿ ಏನ್ ಇಲ್ವಾ.. ಕಪಾಳಕ್ಕೆ ಹೊಡಿತಿನಿ… ನಮ್ಮಲ್ಲಿ ಸೀಟ್ ಸಿಗಲ್ಲಂತ ಮಂದಿಯಲ್ಲಾ ಬೈಯುತ್ತಿದ್ದಾರೆ…‌ಎಂದು ಕಿಡಿಕಾರಿದ ಶಾಸಕರು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಹಾಸ್ಟೆಲ್ ವಾರ್ಡನ್ ಮತ್ತು ಮುಖ್ಯೋಪಾಧ್ಯಾಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button