Latest

ಸಿಎಂ ಯಡಿಯೂರಪ್ಪ ಪರ ಸಿದ್ಧಗಂಗಾ ಶ್ರೀ ಬ್ಯಾಟಿಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದೊಂದು ವಾರದಿಂದ ಸಿಎಂ ಬದಲಾವಣೆ ಮಾತುಗಳು ಕೇಳಿಬರುತ್ತಿದ್ದು, ಈ ನಿಟ್ಟಿನಲ್ಲಿ ಸಿಎಂ ಭೇಟಿಯಾಗಿ ಚರ್ಚಿಸಿದ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ಯದಿಯೂರಪ್ಪನವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.

ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಗಂಗಾ ಶ್ರೀ, ಮಠಾಧೀಶರು ಯಾವ ಪಕ್ಷ ಅಥವಾ ವ್ಯಕ್ತಿ ಪರವೂ ಇಲ್ಲ, ಯಡಿಯೂರಪ್ಪ ಓರ್ವ ಪಕ್ಷಾತೀತ ಸಮರ್ಥ ನಾಯಕ. ಅವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಯತ್ನ ಮಾಡಿದ್ದೇವೆ ಎಂದರು.

ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿದ್ದೇವೆ, ಒಂದೆಡೆ ಮಳೆಗಾಲ ಕೂಡ ಆರಂಭವಾಗಿದೆ. ರಾಜ್ಯ ಸಂದಿಗ್ಧ ಸ್ಥಿತಿಯಲ್ಲಿದೆ ಇಂತಹ ಸ್ಥಿಯಲ್ಲಿರುವಾಗಸಮರ್ಥ ನಾಯಕರಾಗಿರುವ ಯಡಿಯೂರಪ್ಪ ಬದಲಾವಣೆ ಸರಿಯಲ್ಲ. ಬದಲಾವಣೆ ಮಾಡುತ್ತಾಹೋಗುವುದರಿಂದ ಸುಭದ್ರ ಆಡಳಿತ, ಸರ್ಕಾರ ಯಾವುದೂ ಸಾಧ್ಯವಿಲ್ಲ ಎಂದು ಹೇಳಿದರು.

ಸಿಎಂ ಯಡಿಯೂರಪ್ಪನವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಮುಂದೆ ಚುನಾವಣೆ ಎದುರಾದಾಗ ಬೇರೆಯವರು ಸಿಎಂ ಆದರೆ ಆಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ನಮ್ಮ ಮುಖ್ಯಮಂತ್ರಿಗಳೆ. ಆ ನಿಟ್ಟಿನಲ್ಲಿ ನಮ್ಮ ಬೆಂಬಲ ಎಲ್ಲರಿಗೂ ಇರುತ್ತೆ. ಪ್ರಜಾಪ್ರಭುತ್ವದಲ್ಲಿ ಜಾತಿ ಬೇಧವಿಲ್ಲ ಎಲ್ಲರಿಗೂ ಅವಕಾಶವಿದೆ ನಾವು ಯಾರೊಬ್ಬರ ಪರವಾಗಿ ಮಾತನಾಡುತ್ತಿಲ್ಲ ಆದರೆ ಈ ಸಂದರ್ಭದಲ್ಲಿ ಬದಲಾವಣೆ ಬೇಡ ಯಡಿಯೂರಪ್ಪ ಪೂರ್ಣಾವಧಿ ಮುಗಿಸಲಿ ಎಂಬುದನ್ನು ಕೇಳುತ್ತಿದ್ದೇವೆ ಅಷ್ಟೆ ಎಂದು ಹೇಳಿದರು.

Home add -Advt

ಇನ್ನು ಯಡಿಯೂರಪ್ಪ ರಾಜೀನಾಮೆ ಬಗ್ಗೆ ಏನನ್ನೂ ಹೇಳಿಲ್ಲ, 75 ವರ್ಷ ದಾಟಿದ ಯಾರಿಗೂ ಆಡಳಿತಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಪ್ರಧಾನಿ ಮೋದಿ ಹಾಗೂ ಹೈಕಮಾಂಡ್ ನಮ್ಮ ಮೇಲೆ ವಿಶೇಷ ಕಾಳಜಿ, ವಿಶ್ವಾಸವಿಟ್ಟು ಅವಕಾಶ ನೀಡಿದೆ ಎಂದು ಹೇಳಿದ್ದಾರೆ ಎಂದರು.
ಬಾಂಬೆ ಫ್ರೆಂಡ್ಸ್ ವಿರುದ್ಧವೇ ತಿರುಗಿಬಿದ್ದ ಹೆಚ್.ವಿಶ್ವನಾಥ್

Related Articles

Back to top button