Latest

ಸಿದ್ದರಾಮಯ್ಯ ಸಿಎಂ ಇದ್ದಾಗ 6 ಗಂಟೆಗೆ ಎಲ್ಲಿಗೆ ಹೋಗ್ತಿದ್ರು?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 12 ಗಂಟೆಗೆ ಮನೆಗೆ ಹೋಗಿ ಮಲಗಿದ್ದವರು 3.30ಕ್ಕೆ ಕಚೇರಿಗೆ ಬರ್ತಿದ್ರು, ಮತ್ತೆ 5.30 -6 ಗಂಟೆಗೆ ಹೋಗಿಬಿಡ್ತಿದ್ರು. 6 ಗಂಟೆಗೆ ಎಲ್ಲಿಗೆ ಹೋಗ್ತಿದ್ರು ಎಂದು ಅವರನ್ನೇ ಕೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ಹೊಟೆಲ್ ಗಿರಾಕಿ. ಹೊಟೆಲ್ ನಿಂದ ಆಡಳಿತ ನಡೆಸ್ತಿದ್ರು. ಶಾಸಕರ ಕೈಗೆ ಸಿಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Home add -Advt

ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಇಳಿದರೂ ಸರಕಾರಿ ಬಂಗ್ಲೆ ಖಾಲಿ ಮಾಡಿರಲಿಲ್ಲ. ಹಾಗಾಗಿ ನಾನು ಹೊಟೆಲ್ ನಲ್ಲಿ ಇರಬೇಕಾಗಿತ್ತು. ಆದರೆ ಹೊಟೆಲ್ ನಲ್ಲಿ ನಾನು ರೂಂ ಮಾಡಿದ್ದು ಮುಖ್ಯಮಂತ್ರಿ ಆದಮೇಲಲ್ಲ, ಮೊದಲಿನಿಂದಲೂ ಇತ್ತು ಎಂದು ಅವರು ಹೇಳಿದರು.

ಶಾಸಕರಿಗೆ ಸುಲಭವಾಗಿ ಸಿಗುವ ಮುಖ್ಯಮಂತ್ರಿ ನಾನಾಗಿದ್ದೆ. ನನ್ನಷ್ಟು ಶಾಸಕರಿಗೆ ಹತ್ತಿರವಾಗಿದ್ದ ಸಿಎಂ ಬೇರೆ ಯಾರೂ ಇಲ್ಲ ಎಂದೂ ಕುಮಾರಸ್ವಾಮಿ ತಿಳಿಸಿದರು.

ಸರಕಾರ ರಚಿಸುವಂತೆ ಕಾಂಗ್ರೆಸ್ ಮುಖಂಡರು ನಮ್ಮ ಮನೆ ಬಾಗಿಲಿಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ. ನನಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದೂ ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯ ಒಳ ಒಪ್ಪಂದಗಳ ಜನಕ. ಇದರ ಬಗ್ಗೆ ಮಾತನಾಡುವ ಹಕ್ಕಿಲ್ಲ. ನಿಮ್ಮ ಸ್ವಂತ ಶಕ್ತಿಯ ಮೇಲೆ ಪ್ರಾದೇಶಿಕ ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ ಎಂದು ಸವಾಲೆಸೆದರು.

ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆಗೆ ಡಿಕೆಶಿ ತಣ್ಣನೆಯ ಪ್ರತಿಕ್ರಿಯೆ

ಮಾಜಿ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಸ್ಟೇಟ್ ಮೆಂಟ್

Related Articles

Back to top button