ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಚಿವ ಸಂಪುಟದ ನಿರ್ಧಾರಗಳು:
ಕೆ.ಪಿ.ಎಸ್.ಸಿ ನಿಯಮಗಳಿಗೆ ತಿದ್ದುಪಡಿ:
ಕೆಪಿ ಎಸ್ ಸಿ ನಿಯಮ ೨೦೨೫ರ ಕರಡನ್ನು ಭಾರತ ಸಂವಿಧಾನದ ಅನುಚ್ಛೇದ ೩೧೮ ರನ್ವಯ ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ ಆಕ್ಷೇಪಣೆ/ ಸಲಹೆಗಳನ್ನು ಆಹ್ವಾನಿಸಲು; ಹಾಗೂ ಸದರಿ ಕರಡು ವಿನಿಮಯಗಳಿಗೆ ಯಾವುದೇ ಆಕ್ಷೇಪಣೆ/ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಕರಡು ವಿನಿಯಮಗಳಲ್ಲಿ ಯಾವುದೇ ಪ್ರಮುಖ ತಿದ್ದುಪಡಿಗಳನ್ನು ಮಾಡುವ ಅವಶ್ಯಕತೆ ಇಲ್ಲದಿದ್ದಲ್ಲಿ ಸದರಿ ವಿನಿಯಮಗಳನ್ನು ಪುನ: ಸಚಿವ ಸಂಪುಟ ಮುಂದೆ ಮಂಡಿಸದೇ ಅಂತಿಮಗೊಳಿಸಲು; ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿ/ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿ/ಸಿಬ್ಬಂದಿಗಳ ಸೇವಾ ಷರತ್ತುಗಳು ಮತ್ತು ನೇಮಕಾತಿ ವಿಧಾನವನ್ನು ಬದಲಾಯಿಸಲು ಪ್ರಸ್ತಾಪಿಸಲಾಗಿತ್ತು.
ಕ್ರೀಡಾಪಟುಗಳ ಮೀಸಲಾತಿ ಹೆಚ್ಚಳ:
ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸಟೇಬಲ್ನಿಂದ ಡಿವೈಎಸ್ಪಿ ವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.೨ ರಿಂದ ಶೇ.೩ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈಗ ಈ ಮೀಸಲಾತಿ ಪ್ರಮಾಣ ಶೇ.೨ ರಷ್ಟಿದ್ದು ಇದನ್ನು ಶೇ.೩ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. ೨೦೨೩ರಲ್ಲಿನ ಅನುಸೂಚಿಯ ಕ್ರಮ ಸಂಖ್ಯೆ (೩) ರಲ್ಲಿ ಡಿ.ವೈ.ಎಸ್.ಪಿ ಹುದ್ದೆಯ ವಯೋಮಿತಿ ಕಾಲಂನಲ್ಲಿ ಎಸ್ಸಿ/ಎಸ್ಟಿ ಹಾಗೂ ಕೆಟಗರಿ-೧ ರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ೪೫ ವರ್ಷಗಳಿಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗುವುದು.
ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಮತ್ತು ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಡುಗಳ ನೇರ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, ೨೦೨೫ರ ಕರಡು ನಿಯಮಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾದವರಿಂದ ಆಕ್ಷೇಪಣೆ / ಸಲಹೆಗಳನ್ನು ಆಹ್ವಾನಿಸಲು; ಸದರಿ ನಿಯಮಗಳಿಗೆ ಯಾವುದೇ ಗಂಭೀರ ಸ್ವರೂಪದ ಆಕ್ಷೇಪಣೆ / ಸಲಹೆಗಳನ್ನು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ / ಸಲಹೆಗಳನ್ನು ಪರಿಗಣಿಸಿ ಕರಡು ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದಲ್ಲಿ ಪುನ: ಸಚಿವ ಸಂಪುಟದ ಮುಂದೆ ಮಂಡಿಸದೇ ಸದರಿ ಕರಡು ನಿಯಮಗಳನ್ನು ಅಂತಿಮಗೊಳಿಸಲು; ಸಚಿವ ಸಂಪುಟ ನಿರ್ಧರಿಸಿದೆ. ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳ ಮೀಸಲಾತಿಯ ಪ್ರಮಾಣವನ್ನು ಶೇ.೩ ಕ್ಕೆ ಹೆಚ್ಚಿಸಲು ಘೋಷಿಸಲಾಗಿತ್ತು.
ಪಿಪಿಪಿ ಕಾರ್ಯನೀತಿಗೆ ಅನುಮೋದನೆ
ಕರ್ನಾಟಕ ಸರ್ಕಾರದ (ವ್ಯವಹಾರದ ವಹಿವಾಟು) ನಿಯಮಗಳು, ೧೯೭೭ರ ಮೊದಲ ಶೆಡ್ಯೂಲ್ನ ಐಟಂ ಸಂಖ್ಯೆ: ೨೮ರ ಪ್ರಕಾರ, ಅನುಬಂಧ-೧ ರಲ್ಲಿ ರಾಜ್ಯ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕಾರ್ಯನೀತಿ – ೨೦೨೫ಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಸುಸ್ಥಿರ ಅಭಿವೃದ್ಧಿಯೊಂದಿಗೆ ಹೆಚ್ಚಿನ ಬೆಳವಣಿಗೆ ಮತ್ತು ಸಮಾನತೆಯನ್ನು ಸಾಧಿಸುವ ಸಾಧನವಾಗಿ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ವಿಸ್ತರಿಸಿ, ಆಳಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮಾದರಿಯಾಗಿ ಸ್ಥಾಪಿಸುವುದಾಗಿದೆ.
ವಿವಿಧ ವಲಯಗಳ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತದೆ. ಪಿಪಿಪಿ ಕಾರ್ಯನೀತಿ ೨೦೧೮ರ ಪ್ಯಾರಾ (೬೩) ಪ್ರತಿ ಮೂರು ವರ್ಷಗಳಿಗೊಮ್ಮೆ ಭಾಗಿದಾರರ ಪ್ರತಿಕ್ರಿಯೆಗಳ ನಿರ್ಣಾಯಕ ಮೌಲ್ಯಮಾಪನ ಆಧರಿಸಿ ಈ ಹಂತದಲ್ಲಿ ಅಗತ್ಯ ಮತ್ತು ಅಪೇಕ್ಷಣೀಯವೆಂದು ಪರಿಗಣಿಸಲಾದ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಮಧ್ಯಮಾವಧಿ ಪರಿಶೀಲನೆಗೆ ಶಿಫಾರಸ್ಸು ಮಾಡಲಾಗಿದೆ.
ಕಿರು ಬಂದರುಗಳಲ್ಲಿ ಶುಲ್ಕ ಪರಿಷ್ಕರಣೆ
ಲೋಕೋಪಯೋಗಿ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಅದಿಸೂಚನೆಯಂತೆ ರಾಜ್ಯದ ಕಿರು ಬಂದರುಗಳಲ್ಲಿ ಸಂಗ್ರಹಿಸುತ್ತಿರುವ ಬಂದರು ಶುಲ್ಕ ಪರಿಷ್ಕರಿಸಲಾಗಿತ್ತು. ರಾಜ್ಯದ ಕಿರು ಬಂದರುಗಳಲ್ಲಿ ಸಂಗ್ರಹಿಸುತ್ತಿರುವ Piಟoಣಚಿge ಂಟಿಜ ಖಿug Seಡಿviಛಿes ಶುಲ್ಕಗಳನ್ನು ಪರಿಷ್ಕರಿಸಲು ಪ್ರಸ್ತಾಪಿಸಲಾಗಿತ್ತು.
ರಾಜ್ಯದ ಚಿಕ್ಕ ಬಂದರುಗಳಲ್ಲಿ ವಿಧಿಸಲಾಗುತ್ತಿರುವ ಬಂದರು ಶುಲ್ಕ, ಪೈಲಟೇಜ್ ಮತ್ತು ಟಗ್ ಬಾಡಿಗೆ ಶುಲ್ಕಗಳ ಪರಿಷ್ಕರಣೆ ಹಾಗೂ ಹಾರ್ಬರ್ ಕ್ರಾಫ್ಟ್ ಸರ್ವೆ ಮತ್ತು ನೋಂದಣಿ ಶುಲ್ಕ ಹಾಗೂ ಇನ್ಲ್ಯಾಂಡ್ ವೆಸೆಲ್ಸ್ ನಾವೆಗಳ ಸರ್ವೆ ಮತ್ತು ನೋಂದಣಿ ಶುಲ್ಕಗಳ ಪರಿಷ್ಕರಿಸಲು ಸಚಿವ ಸಂಪುಟ ನಿರ್ಧರಿಸಲಾಗಿದೆ.
ಕರ್ನಾಟಕ ಜಲಸಾರಿಗೆ ಮಂಡಳಿಯಿAದ Iಟಿಟಚಿಟಿಜ ಗಿesseಟs ನಾವೆಗಳ ಪರವಾನಗಿ ಮತ್ತು ವಾರ್ಷಿಕ ಪರವಾನಗಿ ನವೀಕರಣ ಶುಲ್ಕಗಳನ್ನು ಪರಿಷ್ಕರಿಸಲು ಉದ್ದೇಸಿಸಲಾಗಿದೆ.
ಈ ಕ್ರಮದಿಂದ ವಾರ್ಷಿಕ ರೂ.೩.೫೦ ರಿಂದ ೪.೦೦ ರವರೆಗಿನ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ.
ರಾಜ್ಯದ ಸಣ್ಣ ಬಂದರುಗಳು – ಕಾರವಾರ, ಹೊನ್ನಾವರ, ಮಲ್ಪೆ, ಬೇಲೇಕೇರಿ, ಮಂಕಿ, ಪಡುಬಿದ್ರಿ, ಕೇಣಿ, ಭಟ್ಕಳ, ಹಳೇ ಮಂಗಳೂರು, ತದಡಿ, ಕುಂದಾಪುರ, ಪಾವಿನಕುರ್ವೆ ಮತ್ತು ಹಂಗಾರಕಟ್ಟಾ.
ರೈಲ್ವೆ ಕ್ರಾಸಿಂಗ್ ಬದಲು ಮೇಲ್ಸೇತುವೆ
ಹೊಳೆನರಸೀಪುರ ರೈಲು ಮಾರ್ಗದ ನಡುವಿನ ಕಿ.ಮೀ ೧/೬೦೦/೭೦೦ ರಲ್ಲಿ ಬರುವ ರೈಲ್ವೆ ಕ್ರಾಸಿಂಗ್ ಗೇಟ್ ಸಂಖ್ಯೆ ೩ರ ಬದಲಿಗೆ ರಸ್ತೆ ಮೇಲ್ಸೇತುವೆ ಮತ್ತು ಕೂಡುರಸ್ತೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತವನ್ನು ರೂ.೪೫.೯೯ ಕೋಟಿಗಳಿಂದ ರೂ.೮೩.೭೨ ಕೋಟಿಗಳಿಗೆ ಹೆಚ್ಚುವರಿಯಾಗಿ ಪರಿಷ್ಕರಣೆ ಮಾಡಲು ತಾಂತ್ರಿಕ ಸಮಿತಿಯ ಒಪ್ಪಿಗೆಯನ್ನು ಸಚಿವ ಸಂಪುಟ ಅನುಮೋದಿಸಿದೆ.
ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ಕಿ.ಮೀ ೧/೬೦೦-೭೦೦ ರಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ:೩ ರ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ.೮೩.೭೨ ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಮತ್ತು ರಾಜ್ಯ ಸರ್ಕಾರದ ಪಾಲಿನ ಪರಿಷ್ಕೃತ ಮೊತ್ತ ರೂ.೪೯.೫೪ ಕೋಟಿಗಳಲ್ಲಿ ಈಗಾಗಲೇ ಭರಿಸಿರುವ ರೂ.೨೭.೭೦ ಕೊಟಿಗಳನ್ನು ಹೊರತುಪಡಿಸಿ ಬಾಕಿ ಇರುವ ರೂ.೨೧.೮೪ ಕೋಟಿಗಳ ಮೊತ್ತವನ್ನು ಲೋಕೋಪಯೋಗಿ ಇಲಾಖೆಯಿಂದ ಭರಿಸಲು; ಸಚಿವ ಸಂಪುಟ ಅನುಮೋದಿಸಿದೆ.
ಅಕ್ಷಯ ಫುಡ್ ಪಾರ್ಕ್ ಗೆ ೪ ಪಥ ರಸ್ತೆ
ಚಿತ್ರದುರ್ಗ ಜಿಲ್ಲೆಯಲ್ಲಿ ತರಕಾರಿ, ಹಣ್ಣು-ಹಂಪಲು ಹಾಗೂ ಇತರೆ ದವಸ ಧಾನ್ಯಗಳನ್ನು ಶೇಖರಿಸಲು ಹಿರಿಯೂರು ನಗರದಿಂದ ಸುಮಾರು ೩ ಕಿ.ಮೀ ದೂರದಲ್ಲಿ ದಾಸ್ತಾನು ಮಾಡಲು ೧೦೭ ಎಕರೆ ವಿಸ್ತೀರ್ಣದಲ್ಲಿ ಅಕ್ಷಯ ಫುಡ್ ಪಾರ್ಕ್ ಕಂಪನಿಯವರು ಒಂದು ಘಟಕವನ್ನು ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪಿಸಿದ್ದಾರೆ. ಅಕ್ಷಯ ಫುಡ್ ಪಾರ್ಕ್ನ್ನು ಸಂಪರ್ಕಿಸಲು ೪ ಪಥಗಳ ರಸ್ತೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ರಾಜ್ಯ ಹೆದ್ದಾರಿ-೨೪ ರಿಂದ ಅಕ್ಷಯ ಫುಡ್ ಪಾರ್ಕ್ ಸಂಪರ್ಕಿಸಲು ೪ ಪಥಗಳ ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ.೨೦.೦೦ ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಗೆ ಗುತ್ತಿಗೆ ಆಹ್ವಾನಿಸಲು; ಸಚಿವ ಸಂಪುಟ ನಿರ್ಣಯಿಸಿದೆ.
ಒಟ್ಟು ಯೋಜನಾ ವೆಚ್ಚ ರೂ.೨೦.೦೦ ಕೋಟಿಗಳು. ಭೂಸ್ವಾಧೀನಕ್ಕೆ ರೂ.೫.೦೦ ಕೋಟಿ. ೧.೭೫ ಕಿ.ಮೀ ಉದ್ದದ ೪ ಪಥದ ರಸ್ತೆ ನಿರ್ಮಾಣಕ್ಕೆ ರೂ.೧೫.೦೦ ಕೋಟಿ ವೆಚ್ಚ ಅಂದಾಜಿಸಲಾಗಿದೆ. ಸಂಸ್ಥೆಯು ರೂ.೧೧.೬೩ ಕೋಟಿ ಸಾಲ ನೀಡುತ್ತಿದ್ದು, ರೂ.೮.೩೬ ಕೋಟಿ ರಾಜ್ಯ ಸರ್ಕಾರದಿಂದ ಭರಿಸಲಾಗುವುದು. ಅಕ್ಷಯ ಫುಡ್ ಪಾಕ್ಗೆ ಉತ್ತಮ ಸಂಪರ್ಕ ರಸ್ತೆ ಒದಗಿಸುವುದರಿಂದ ಸುತ್ತಮುತ್ತಲಿನ ಭಾಗಗಳಿಂದ ರೈತರು ಬೆಳೆದ ಉತ್ಪನ್ನಗಳನ್ನು ಆಹಾರ ಸಂಸ್ಕರಣೆ ಪಾರ್ಕ್ಗೆ ಸಾಗಾಣೆ ಮಾಡಲು ಹಾಗೂ ಸಂಸ್ಕರಿಸಿದ ಉತ್ಪನ್ನಗಳನ್ನು ಪಾರ್ಕ್ನಿಂದ ಹೊರಗೆ ಸಾಗಾಣೆ ಮಾಡಲು ವಾಹನಗಳಿಗೆ ಹೆಚ್ಚಿನ ಅನುಕೂಲವಾಗುವುದು.
ಕಡಣಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ.೪೪.೫೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
ಕಲಬುರಗಿ ಜಿಲ್ಲೆ ಸೊನ್ನ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ನ್ನು ನಿರ್ಮಿಸಿದ್ದು, ಇದರಿಂದ ನದಿಯಲ್ಲಿ ಪೂರ್ಣ ಪ್ರಮಾಣದ ನೀರು ನಿಲ್ಲಿಸಿದಾಗ ನೀರಿನ ಮಟ್ಟ ಅಧಿಕಗೊಂಡು ಕರ್ನಾಟಕ ಭೂಸೇನ ಮತ್ತು ಸಣ್ಣ ನೀರಾವರಿ ವತಿಯಿಂದ ನಿರ್ಮಿಸಲಾದ ಬ್ರಿಡ್ಜ್-ಕಂ-ಬ್ಯಾರೇಜ್ನ ಎತ್ತರವು ಕಡಿಮೆ ಇರುವುದರಿಂದ ಸದರಿ ಸೇತುವೆಯು ಮುಳುಗಡೆಗೊಂಡು ಅಫ್ಜಲ್ಪುರ ಮತ್ತು ಸಿಂದಗಿ ತಾಲ್ಲೂಕುಗಳ ಮಧ್ಯೆ ಸಂಪರ್ಕ ಕಡಿತಗೊಂಡು ಸಾರ್ವಜನಿಕ ಸಂಚಾರಕ್ಕೆ ವ್ಯತ್ಯಯವಾಗುವ ಈ ಸಂದರ್ಭದಲ್ಲಿ ಸಾರ್ವಜನಿಕರು ನದಿಯನ್ನು ದೋಣಿ/ತೆಪ್ಪಗಳ ಮೂಲಕ ದಾಟುವ ಅನಿವಾರ್ಯತೆ ಉಂಟಾಗುವುದರಿAದ ಹಲವಾರು ಬಾರಿ ಸಾರ್ವಜನಿಕರ ಜೀವಹಾನಿ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ಸೇತುವೆ ನಿರ್ಮಾಣ ಕಾಮಗಾರಿಯಿಂದ ಆಲಮೇಲ ತಾಲ್ಲೂಕಿನ ಕಡಣಿ, ತಾರಪುರ, ಆಲಮೇಲ, ಗುಂದಗಿ, ಬಳಗಾನೂರ, ಕೋರಹಳ್ಳಿ, ಹೂವಿನಹಳ್ಳಿ ಮತ್ತು ಮಿರಗಿ ಹಾಗೂ ಅಫಜಲಪೂರ ತಾಲ್ಲೂಕಿನ ದುಧನಿ, ಕರಜಿಗಿ, ಸಿರ್ವಾರ ಮತ್ತು ಹತ್ತಿರದ ಸಣ್ಣ ಪುಟ್ಟ ಗ್ರಾಮಗಳಿಗೆ ಸಂಚಾರ ಕಲ್ಪಿಸಿದಂತಾಗುತ್ತದೆ ಎಂದು ಪ್ರಸ್ತಾಪಿಸಲಾಗಿದೆ.
೫೦ ಗ್ರಾಮ ಪಂಚಾಯತಿಗಳಲ್ಲಿ ಹೊಂಬೆಳಕು
“ಹೊಂಬೆಳಕು” ಯೋಜನೆಯಡಿ ೫೦ ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ರೂ.೨೫.೦೦ ಕೋಟಿಗಳ ವೆಚ್ಚದಲ್ಲಿ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಗ್ರಾಮ ಪಂಚಾಯತಗಳಲ್ಲಿನ ವಿದ್ಯುತ್ ಬಳಕೆಯ ಮೇಲೆ ನಿಘಾವಹಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು ಸೌರ ಬೀದಿ ದೀಪಗಳು ಅತ್ಯಾವಶ್ಯಕವಾಗಿವೆ. ಸೌರ ಬೀದಿ ದೀಪಗಳು ನವೀಕರಿಸಬಹುದಾದ, ಪರಿಣಾಮಕಾರಿ ಮತ್ತು ಸ್ಥಾಪಿಸಲು/ನಿರ್ವಹಿಸಲು ಸುಲಭವಾಗಿರುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಮಿತವ್ಯಯಕ್ಕೆ ಸಹಕಾರಿಯಾಗುವುದರಿಂದ ಸಾಂಪ್ರದಾಯಿಕ ಬೀದಿ ದೀಪಗಳಿಗಿಂತ ಸೌರ ಬೀದಿ ದೀಪಗಳು ಹೆಚ್ಚು ಶಕ್ತಿ ಮತ್ತು ಸಮರ್ಪಕವಾಗಿರುತ್ತವೆ ಎಂದು ಹೊಂಬೆಳಕು ಯೋಜನೆಯಡಿ ೫೦ ಗ್ರಾಮ ಪಂಚಾಯತಿಗಳಲ್ಲಿ ಅಳವಡಿಸಲು ಪ್ರಸ್ತಾಪಿಸಲಾಗಿದೆ.
ಸೇವೆಗೆ ಮರುಸ್ಥಾಪನೆ
ಎಂ.ಬಿ ಭಜಂತ್ರಿ ಸೇವೆಯಿಂದ ವಜಾಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ, ಅಥಣಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಇವರನ್ನು ಸೇವೆಯಿಂದ ವಜಾಗೊಳಿಸಿರುವ ಸರ್ಕಾರದ ಆದೇಶ ಸಂಖ್ಯೆ: ಇಡಿ ೮೦ ಡಿಜಿಎಂ ೨೦೧೭, ದಿನಾಂಕ: ೧೫.೧೧.೨೦೨೨ ರಲ್ಲಿ ದಂಡನಾದೇಶವನ್ನು ಹಿಂಪಡೆಯಲು; ಸಚಿವ ಸಂಪುಟ ಅನುಮೋದನೆ ನೀಡಿದೆ.
ಕರ್ನಾಟಕ ಆಡಳಿತ ಮಂಡಳಿ ಬೆಳಗಾವಿ ಪೀಠ ಮತ್ತು ಮಾನ್ಯ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿರುವ ದಂಡನಾ ಆದೇಶವನ್ನು ಪ್ರಸ್ತಾಪಿಸಲಾಗಿತ್ತು.
ಉಪನಗರ ಯೋಜನೆಗೆ ಅನುಮೋದನೆ
ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳೊAದಿಗೆ ಸ್ಯಾಟಲೈಟ್ ಟೌನ್ಶಿಪ್ ಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶ: ಗ್ರಾಮ ಸೇರಿ ಒಟ್ಟು ೧೦ ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.
ರ್ಕಾರದ ಅಧಿಸೂಚನೆ ಸಂಖ್ಯೆ: ನಅಇ ೯೭ ಬಿಎಂಆರ್ ೨೦೦೬ ದಿನಾಂಕ:೧೮.೧೦.೨೦೦೬ ರಲ್ಲಿ ಬಿಡದಿ, ಸಾತನೂರು, ರಾಮನಗರ, ಸೋಲೂರು ಮತ್ತು ನಂದಗುಡಿಯಲ್ಲಿ ೦೫ ಸಮಗ್ರ ಉಪನಗರಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು.
೨. ರಾಜ್ಯ ರ್ಕಾರದ ೨೦೨೪-೨೫ ನೇ ಸಾಲಿನ ಬಜೆಟ್ನ ಪ್ಯಾರಾ ೨೭೦ರಲ್ಲಿ ಟೌನ್ಶಿಪ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದಾಗಿ ಈ ಕೆಳಕಂಡಂತೆ ಘೋಷಿಸಿದೆ:
“ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು, ರ್ಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತದೆ ಸುಸ್ಥಿರ ಮೂಲ ಸೌಕರ್ಯದೊಂದಿಗೆ ರಾಜ್ಯದಲ್ಲಿ ಆರ್ಷಕ ನಗರಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು.
ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂರ್ಕದೊಂದಿಗೆ ಸ್ಯಾಟಲೈಟ್ ಟೌನ್ಶಿಪ್ಗಳಾಗಿ ಅಭಿವೃದ್ಧಿಪಡಿಸಲಾಗುವುದು.
೩. ರ್ಕಾರದ ಅಧಿಸೂಚನೆ ಸಂಖ್ಯೆ: ನಅಇ ೧೧೯ ಬಿಎಂಆರ್ ೨೦೨೩(ಇ), ದಿನಾಂಕ:೧೮.೧೧.೨೦೨೩ ರಲ್ಲಿ ರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ,೧೯೮೭ ರಡಿಯಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ರ್ಜೆಗೇರಿಸಿ ಅಧಿಸೂಚಿಸಲಾಗಿರುತ್ತದೆ.
೪. ರ್ಕಾರದ ಆದೇಶ ಸಂಖ್ಯೆ.ಯುಡಿಡಿ ೧೧೫ ಬಿಎಂಆರ್ ೨೦೨೪ (ಇ) ದಿನಾಂಕ: ೦೨.೦೯.೨೦೨೪ ರಲ್ಲಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ, ಹಾಗೂ ಹಾರೋಹಳ್ಳಿ ತಾಲ್ಲೂಕು, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ ಸಾಗುವಳಿ ವಿಸ್ತರ್ಣ ೬೦೨೩ಎಕರೆ-೨೪ಗುಂಟೆ ಹಾಗೂ ‘ಎ’ ಖರಾಬು ವಿಸ್ತರ್ಣದ ಒಟ್ಟು ೧೦೧ಎಕರೆ-೧೨ಗುಂಟೆ ಮತ್ತು ‘ಬಿ’ ಖರಾಬು ವಿಸ್ತರ್ಣ ೨೮೧೮ಎ-೩೯ಗುಂಟೆ ಪೈಕಿ ೭೨೨ಎ-೩೧ಗುಂಟೆ ಕೆರೆ ಪುದೇಶ ಸೇರಿದಂತೆ ಸುಮಾರು ಒಟ್ಟು ೮೯೪೩ಎ-೩೫ಗುಂಟೆ ಪ್ರದೇಶದಲ್ಲಿ ಈಗಾಗಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಖಾತೆ ತೆರೆದಿರುವ ನಿವೇಶನಗಳನ್ನು ಒಳಗೊಂಡಂತೆ, ಹ್ಯಾಮ್ಲೆಟ್, ಸೆಟಲ್ಮೆಂಟ್, ಶಾಲೆ/ಕಾಲೇಜು, ಕೆರೆ, ಸ್ಮಶಾನ ಮತ್ತಿತರೆ ಸಾರ್ವಜನಿಕ ಉದ್ದೇಶಿತ ಜಾಗಗಳನ್ನು ಯಥಾವತ್ತಾಗಿ ಕಾಯ್ದಿರಿಸಿ, ಉಳಿದ ಪ್ರದೇಶಕ್ಕೆ ಪ್ರಸ್ತುತ ಪ್ರಥಮ ಹಂತದಲ್ಲಿ ಬಿಡದಿ ಸಮಗ್ರ ಉಪನಗರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಪ್ರಕ್ರಿಯೆಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ ರ್ಕಾರದ ತಾತ್ವಿಕ ಅನುಮೋದನೆ ನೀಡಲಾಗಿದೆ.
೫. ಪ್ರಮುಖ ಪ್ರದೇಶದಲ್ಲಿನ ಎಲ್ಲಾ ಟೌನ್ಶಿಪ್ ಅಭಿವೃದ್ಧಿ ಚಟುವಟಿಕೆಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಾರ್ಯಗತಗೊಳಿಸುತ್ತದೆ.
೬. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲ್ಲೂಕು, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮ ಭಾಗಶಃ ಸೇರಿ ಒಟ್ಟು ೧೦ ಗ್ರಾಮಗಳ ವ್ಯಾಪ್ತಿಯಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ” ಅಭಿವೃದ್ಧಿ ಯೋಜನೆಯನ್ನು ರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ, ೧೯೮೭ ರ ಸೆಕ್ಷನ್ ೧೫(೧)(b) ಅಡಿಯಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
೭. ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಯೋಜನೆಗಾಗಿ ಮೇಲಿನ ೧೦ ಗ್ರಾಮಗಳಲ್ಲಿನ ಸುಮಾರು ೮೯೪೩ ಎಕರೆ ಪ್ರದೇಶದ ಪೈಕಿ ೮೦೩೨- ೩೭ ಎಕರೆ-ಗುಂಟೆ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆಗಳನ್ನು ರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ-೧೯೮೭ರ ಕಲಂ.೩೫ & ೩೬ ರ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಹಾಗೂ ರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು (ಸ್ವಾಧೀನಪಡಿಸಿಕೊಂಡ ಭೂಮಿಗೆ ಬದಲಿ ನಿವೇಶನಗಳ ಹಂಚಿಕೆ ಪರಿಹಾರ) ನಿಯಮಗಳು, ೨೦೦೯ರಲ್ಲಿನ ಭೂ ಹಂಚಿಕೆ ಮಾದರಿಯಲ್ಲಿ(೩೫-೫೦% ಅಭಿವೃದ್ಧಿ ಹೊಂದಿದ ಭೂಮಿಯನ್ನು ಪರಿಹಾರವಾಗಿ)ಪರಿಹಾರವನ್ನು ನೀಡುವ ಮುಖೇನ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
೮. ೯೧೦ ಎಕರೆ ೦೩ ಗುಂಟೆ ಜಾಗವನ್ನು ಈಗಾಗಲೇ ಕೆಇಎಡಿಬಿ ವತಿಯಿಂದ ಭೂಸ್ವಾಧೀನಗೊಳಿಸಿಕೊಂಡಿದ್ದು, ಸದರಿ ಜಾಗವನ್ನು ಹೊರತು ಪಡಿಸಿ ಟೌನ್ಶಿಪ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿತ್ತು.
೮. ಸಮಗ್ರ ಉಪನಗರ ಯೋಜನೆಗಳ ಅನುಷ್ಟಾನಕ್ಕಾಗಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ, ಇಲಾಖೆ ಮತ್ತು ಸಂಸ್ಥೆಗಳನ್ನೊಳಗೊಂಡಂತೆ ರ್ಕಾರದ ಅಪರ ಮುಖ್ಯ ಕಾರ್ಯರದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಅನುಮೋದನೆ ನೀಡಲಾಗಿದೆ.
೯. ಜಾಗತಿಕ ಟೆಂಡರ್ ಕರೆಯುವ ಮೂಲಕ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ Woಡಿಞ-ಐive-Pಟಚಿಥಿ ಪರಿಕಲ್ಪನೆಯಲ್ಲಿ ಟೌನ್ಶಿಪ್ ಅನ್ನು ವಿನ್ಯಾಸಗೊಳಿಸಲು ಮತ್ತು ಯೋಜಿಸಲು ರ್ಹ ಸಂಸ್ಥೆಯನ್ನು ನೇಮಿಸಲು ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 30-01-2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು
- ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸ್ಟೇಬಲ್ ನಿಂದ ಡಿವೈಎಸ್ಪಿವರೆಗೆ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.2 ರಿಂದ ಶೇ.3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
- ಮೂಲಸೌಲಭ್ಯ ವಲಯದ ಪಿಪಿಪಿ ಯೋಜನೆಗಳ ನೀತಿ, 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
- ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ಸಂ: 3 ರ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಯನ್ನು 83.72 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 44.50 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಬೆಂಗಳೂರು ಜನದಟ್ಟಣೆ ಕಡಿಮೆ ಮಾಡಲು ಬಿಡದಿ, ದೇವನಹಳ್ಳಿ, ಹೊಸಕೋಟೆ, ಮಾಗಡಿ, ನೆಲಮಂಗಲಗಳನ್ನು ರಸ್ತೆ ಸೌಲಭ್ಯಗಳನ್ನು ಸೇರಿದಂತೆ ಸ್ಯಾಟಿಲೈಟ್ ಟೌನ್ ಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ತಾಲ್ಲೂಕು, ಬಿಡದಿ ಹೋಬಳಿಯ ವಿವಿಧ ಗ್ರಾಮಗಳು ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಬಾಗಶಃ ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
- ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಲೇಜು ಕಟ್ಟಡಗಳನ್ನು 304 ಕೋಟಿ ರೂ.ಗಳ ಅಂದಾಜು ಹಾಗೂ ಪ್ರಧಾನಮಂತ್ರಿ ಜನವಿಕಾಸ ಯೋಜನೆಯಡಿ 12 ವಸತಿ ಶಾಲೆ/ವಿದ್ಯಾರ್ಥಿನಿಲಯಗಳನ್ನು 191.19 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಮಾರುಕಟ್ಟೆ ಶುಲ್ಕ/ ಬಳಕೆದಾರರ ಶುಲ್ಕವನ್ನು ಮರುಹಂಚಿಕೆ ಮಾಡಲಾಗಿದ್ದು, ಮೂರು ಪೈಸೆಯನ್ನು ಮಾರುಕಟ್ಟೆ ಅಭಿವೃದ್ದಿ ನೆರವು ನಿಧಿಗೆ ವಂತಿಗೆ ನೀಡಲು ನಿರ್ಣಯಿಸಲಾಗಿದೆ.
- ಎಲ್.ಕೆ ಅತೀಕ್ , ಐ.ಎ.ಎಸ್ ಇವರ ನ್ನು ನಿವೃತ್ತ ನಂತರ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿರಗೆ ಆಧಾರದಲ್ಲಿ ಮುಂದುವರೆಸಲು ದಿನಾಂಕ 20-1-2025 ರಂದು ಅಧಿಸೂಚನೆ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
- ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ದಿನಾಂಕ 29-01-2025 ರಂದು ಹೊರಡಿಸಿರುವ ಅಧ್ಯಾದೇಶ, 2025 ನ್ನು ಅನುಷ್ಠಾನಗೊಳಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ರಾಜ್ಯಪಾಲರು ಇದಕ್ಕೆ ಅಂಕಿತವನ್ನು ಹಾಕಿದ್ದು, ಅದರಂತೆ ಸರ್ವೋಚ್ಛ ನ್ಯಾಯಾಲಯ 10-12-2024 ರಂದು ನೀಡಿರುವ ತೀರ್ಪಿನಲ್ಲಿ ಸದರಿ ಜಮೀನಿಗೆ ಟಿಡಿಆರ್ ಮೂಲಕ ಪರಿಹಾರ ನಿಗದಿಪಡಿಸಿರುವ ಮೌಲ್ಯವು, ರಸ್ತೆ ವಿಸ್ತರಣೆ ಯೋಜನೆಯನ್ನು ಆರ್ಥಿಕವಾಗಿ ಕಾರ್ಯಸಾಧುವಲ್ಲದಂತೆ ಮಾಡಿದೆ. ಹಾಗೂ ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ. ಬೆಂಗಳೂರು ನಗರದ, ನಗರ ಯೋಜನೆಗೆ ಕಠಿಣ ಸವಾಲು ಒಡ್ಡುತ್ತದೆ. ಆದ್ದರಿಂದ ರಾಜ್ಯದ ಮೇಲಾಗುವ ತೀವ್ರ ಪರಿಣಾಮದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಬೆಂಗಳೂರು ರಸ್ತೆ ಅಗಲೀಕರಣದ ಯೋಜನೆಯನ್ನು ಬೆಂಗಳೂರು ಅರಮನೆ ಮೈದಾನ ಬಳಕೆ ಮತ್ತು ನಿಯಂತ್ರಣ ಅಧ್ಯಾದೇಶ 2025ಎಂದು ಕಲಂ3 ರಂತೆ ಕೈಬಿಡಲು ಹಾಗೂ ಯೋಜನೆಗೆ ಬಳಸದೇ ಇರುವ ಬೆಂಗಳೂರು ಮಹಾನಗರ ಪಾಲಿಕೆ ವೆಚ್ಚದಲ್ಲಿ ಪೂರ್ವಸ್ಥಿತಿ ತರಲು ಈಗಾಗಲೇ ಜಯಮಹಲ್ ರಸ್ತೆಯ ಅಂಡರ್ ಪಾಸ್ ಗಾಗಿ ಉಪಯೋಗಿಸಿಕೊಂಡಿರುವ 1217.41 ಚ.ಮೀ ವಿಸ್ತೀರ್ಣದ ಜಮೀನನ್ನು ಹಿಂತಿರುಗಿಸಲು ಸಾಧ್ಯವಾಗದೇ ಇರುವುದರಿಂದ ಬೆಂಗಳೂರು ಅರಮನೆ ಮೈದಾನದ ಬಳಕೆ ಮತ್ತು ನಿಯಂತ್ರಣ ಅಧ್ಯಾದೇಶ ಕಲಂ 2025 ಕಲಂ 4 ಮತ್ತು 5ರನ್ವಯ ಕ್ರಮ ಕೈಗೊಳ್ಳಲು ಸರ್ವೋಚ್ಛ ನ್ಯಾಯಾಲಯದ 10-12-2024 ತೀರ್ಪಿನಂತೆ ಸದರಿ ಪ್ರಕರಣದ ವೆಚ್ಚವನ್ನು ಒಂದು ಲಕ್ಷದಂತೆ ದೂರುದಾರರಿಗೆ ಪಾವತಿಸಲು ಬಿಬಿಎಂಪಿ ವತಿಯಿಂದ ಪಾವತಿಸಲು ಸಚಿವ ಸಂಪುಟ ನಿರ್ಣಯಿಸಿದೆ.
10 ಅರಣ್ಯ , ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಟ್ಟು 5678-32 ಎಕರೆ-ಗುಂಟೆ(2298.18 ಹೆಕ್ಟೇರ್) ಪ್ರದೇಶಗಳನ್ನು ವನ್ಯಜೀವಿ 9ಸಂರಕ್ಷಣಾ) ಅಧಿನಿಯಮ, 1972 ರ ಕಲಂ 36(ಎ) ರನ್ವಯ ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ.
- ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮವನ್ನು 5000.ಕೋಟಿ : ವಿಶ್ವ ಬ್ಯಾಂಕ್ ಸಾಲ- 3500 ಕೋಟಿ ಹಾಗೂ ರಾಜ್ಯ ಸರ್ಕಾರದ 1500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಸಚಿವ ಸಂಪುಟ ನಿರ್ಣಯಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ