Kannada NewsKarnataka NewsLatest
*ಮಹಿಳಾ ಕಾನ್ಸ್ ಟೇಬಲ್ ಲತಾ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಶಾಸಕರ ವಿರುದ್ಧ ಸ್ಟೇಟಸ್ ಹಾಕಿದ್ದ ಮಹಿಳಾ ಕಾನ್ಸ ಟೇಬಲ್ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಲತಾ ಅಮಾನತುಗೊಂಡಿರುವ ಮಹಿಳಾ ಪೊಲೀಸ್ ಪೇದೆ. ಪೊಲೀಸ್ ಪೇದೆ ಲತಾ, ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ವಿರುದ್ಧ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದರು.
ಕಡೂರು ಶಾಸಕ ದೌರ್ಜನ್ಯ ನಡೆಸಿದ್ದಾರೆ. ನನಗೆ ಏನೇ ಆದರೂ ಅವರೇ ಕಾರಣ. ಅವರಿಗೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮಹಿಳಾ ಕಾನ್ಸ್ ಟೇಬಲ್ ಲತಾರನ್ನು ಸಸ್ಪೆಂಡ್ ಮಾಡಿ ಚಿಕ್ಕಮಗಳೂರು ಎಸ್.ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.


