Latest
ಎಲ್ಲೆಡೆ ಕಾಮದಹನ, ನಾಳೆ ರಂಗಿನಾಟ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹೋಳಿ ಹಬ್ಬದ ನಿಮಿತ್ತ ಬುಧವಾರ ಬೆಳಗಾವಿಯಲ್ಲಿ ಕಾಮದಹನ ಮಾಡಲಾಗಿದ್ದು, ಗುರುವಾರ ಬಣ್ಣದಾಟ ನಡೆಯಲಿದೆ.
ಬುಧವಾರ ರಾತ್ರಿ ನಗರದ ಹಲವೆಡೆ ಜನರು ಕಾಮನ ಮೂರ್ತಿಗೆ ಬೆಂಕಿ ಹಚ್ಚಿ, ತಮಟೆಗಳನ್ನು ಭಾರಿಸಿ ಕುಣಿದಾಡಿದರು.

ಗುರುವಾರ ಬೆಳಗ್ಗೆಯಿಂದಲೇ ಪರಸ್ಪರ ಬಣ್ಣ ಎರಚುವ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನದವರೆಗೂ ಮಹಿಳೆಯರು, ಮಕ್ಕಳೆನ್ನದೆ ಎಲ್ಲರೂ ಬಣ್ಣದಲ್ಲಿ ಮಿಂದೇಳುವರು.
ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಿಪಿಎಡ್ ಮೈದಾನದಲ್ಲಿ ಹಾಗೂ ಬಿಜೆಪಿ ಮಖಂಡ ಕಿರಣ ಜಾಧವ ಸಂಭಾಜಿ ಉದ್ಯಾನದಲ್ಲಿ ಹೋಳಿ ಮಿಲನ್ ಕಾರ್ಯಕ್ರಮ ಆಯೋಜಿಸಿದ್ದಾರೆ.




