Kannada NewsKarnataka News

ಬೆಳಗಾವಿಯಲ್ಲಿ ದಸರಾ ವೇಳೆ ಕೊರೋನಾ ಹೇಗಿದೆ? ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಗರಿಗೆ ಕೊರೋನಾ ವಿಷಯದಲ್ಲಿ ಖುಷಿಯ ಸುದ್ದಿ ಇಲ್ಲಿದೆ. ಆದರೆ 3ನೇ ಅಲೆಯ ಆತಂಕ ಇನ್ನೂ ಹೋಗದಿರುವುದರಿಂದ ಮೈ ಮರೆಯುವಂತಿಲ್ಲ.

ಗುರುವಾರ ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಇಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿದೆ. ಚಿಕ್ಕೋಡಿಯಲ್ಲಿ ಒಬ್ಬರಿಗೆ ಹಾಗೂ ಹುಕ್ಕೇರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ ಯಾವೊಬ್ಬರಿಗೂ ಸೋಂಕು ಕಾಣಿಸಿಲ್ಲ.  ಯಾವುದೇ ಸಾವು ಕೂಡ ಉಂಟಾಗಿಲ್ಲ.

ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ತಜ್ಞರು 3ನೇ ಅಲೆಯ ಎಚ್ಚರಿಕೆ ನೀಡಿರುವುದರಿಂದ ಮೈ ಮರೆಯುವಂತಿಲ್ಲ.

ಆಯುಧ ಪೂಜೆ; ಇಂದು ಬಂಗಾರದ ಬೆಲೆ ಎಷ್ಟಿದೆ?

Home add -Advt

 

Related Articles

Back to top button