ಪ್ರಗತಿವಾಹಿನಿ ಸುದ್ದಿ; ಮೈಸೂರು: ವರುಣಾ ತಾಲೂಕು ಕೇಂದ್ರ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರೆ ಮಾಡುವುದಿಲ್ಲ, ಅಲ್ಲಿನ ಜನ ಕೇಳಿದ್ರೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವರುಣಾ ತಾಲೂಕು ಕೇಂದ್ರ ವಿಚಾರವಾಗಿ, ವರುಣಾದ ಜನರು ವರುಣಾ ಆಲೂಕು ಕೇಂದ್ರ ಮಾಡಿ ಎಂದು ಯಾವತೂ ಕೇಳಿಲ್ಲ. ಅಲ್ಲಿನ ಜನ ಕೇಳಿದರೆ ಮಾಡುತ್ತೇವೆ ಹೊರತು ಬಸವರಾಜ್ ಬೊಮ್ಮಾಯಿ ಹೇಳಿದ ಮಾತ್ರ ಮಾಡಲ್ಲ ಎಂದರು.
ವರುಣಾ ತಾಲೂಕು ಕೇಂದ್ರ ಮಾಡುತ್ತೇವೆ ಎಂದು ಹೇಳಿದ್ದು ಬಿಜೆಪಿಯವರು, ಬೊಮ್ಮಾಯಿ ಅವರು. ನಾನು ಚುನಾವಣಾ ಪ್ರಚಾರ ಅಮಡುವ ವೇಳೆಯೂ ಜನ ಯಾವತ್ತೂ ತಾಲೂಕು ಮಾಡಿ ಎಂದು ಕೇಳಿಲ್ಲ. ಜನರು ಕೇಳಿದರೆ ಮಾಡುತ್ತೇವೆ ಎಂದು ಹೇಳಿದರು.
https://pragati.taskdun.com/d-k-shivakumarupsc-candidatebgs/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ