
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಮಿಸ್ಸಿ ರೋಗಕ್ಕೆ 5 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆ ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ಅನೇಕ ಮಕ್ಕಳಲ್ಲಿ ಮಾರಣಾಂತಿಕ ಮಿಸ್ಸಿ ರೋಗ ಕಾಣಿಸಿಕೊಳ್ಳುತ್ತಿದ್ದು, ಇದೀಗ 5 ವರ್ಷದ ಪುಟಾಣಿ ಬಾಲಕಿ ಸಾವನ್ನಪ್ಪಿದ್ದಾಳೆ. ತುಮಕೂರು ಜಿಲ್ಲೆ ಶಿರಾ ಮೂಲದ ಬಾಲಕಿ ಮಿಸ್ಸಿ ರೋಗದಿಂದ ಬಳಲುತ್ತಿದ್ದಳು ಕೆಲ ದಿನಗಳಿಂದ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಕೆಗೆ ಬಹು ಅಂಗಾಂಗ ವೈಫಲ್ಯ ಕೂಡ ಉಂಟಾಗಿತ್ತು. ಇದೀಗ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ರಾಜ್ಯದ ಹಲವು ಮಕ್ಕಳಲ್ಲಿ ಮಿಸ್ಸಿ ರೋಗ ಕಾಣಿಸಿಕೊಂದಿದ್ದು, ದಾವಣಗೆರೆ ಜಿಲ್ಲೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಮಿಸ್ಸಿ ರೋಗ ಲಕ್ಷಣವಿರುವ ಅನೇಕ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಿವುಡ್ ನಟ ಡಿನೊ ಮೊರಿಯಾ ಸೇರಿ ಇಬ್ಬರ ಆಸ್ತಿ ಜಪ್ತಿ