National

*ಪ್ರಿಯಾಂಕಾ ಗಾಂಧಿ ಗೆಲುವು ಶತಸಿದ್ಧ: ಸಿಎಂ ಸಿದ್ದರಾಮಯ್ಯ ವಿಶ್ವಾಸ*

ಪ್ರಗತಿವಾಹಿನಿ ಸುದ್ದಿ: ಪ್ರಿಯಾಂಕ ಗಾಂಧಿ ಅವರು ಅತ್ಯಂತ ಬಹುಮತದಿಂದ ವಯನಾಡ್ ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ವ್ಯಕ್ತಪಡಿಸಿದರು.

ವಯನಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಮ್ಮ ವಿರೋಧಿ. ಬಿಜೆಪಿ ಸೋಲಿಸಲು ಎಲ್ಲಾ ಜಾತ್ಯತೀತ ಶಕ್ತಿ ಮತ್ತು ಮೌಲ್ಯಗಳೊಂದಿಗೆ ನಾವು ಜೊತೆ ಸೇರುತ್ತೇವೆ. ಬಿಜೆಪಿ ಸೋಲಿಸಿ ದೇಶ ಉಳಿಸುವುದು ನಮ್ಮ ಮೊದಲ ಗುರಿ ಎಂದರು.

ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಪ್ರಿಯಾಂಕ ಗಾಂಧಿ ಅವರ ಸ್ಫರ್ಧೆಯ ಪರಿಣಾಮ ಏನಾಗಿರಬಹುದು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಿಯಾಂಕ ಗಾಂಧಿ ಅವರು ಅತ್ಯಂತ ಬಹುಮತದಿಂದ ಈ ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button