Latest

ಸಿದ್ದರಾಮೋತ್ಸವ ಅಪಪ್ರಚಾರ ಸುಳ್ಳು; ಅರವಿಂದ ದಳವಾಯಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಕಂಡ ಅಪ್ರತಿಮ ನಾಯಕ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ, ಜೆಡಿಎಸ್ ಸಿದ್ದರಾಮೋತ್ಸವ ಅಪಪ್ರಚಾರ ನಡೆಸಿರುವುದು ಶುದ್ಧ ಸುಳ್ಳು ಎಂದು ಸಿದ್ದರಾಮಯ್ಯ ಅಮೃತ ‌ಮಹೋತ್ಸವ ಸಮಿತಿಯ ಕಾರ್ಯದರ್ಶಿ, ಕಾಂಗ್ರೆಸ್ ‌ಮುಖಂಡ ಅರವಿಂದ ದಳವಾಯಿ ಹೇಳಿದರು.

ಶನಿವಾರ ‌ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯನವರ ಅಮೃತ ಮಹೋತ್ಸವವನ್ನು ಆ.3. ರಂದು ದಾವಣಗೆರೆಯಲ್ಲಿ 75 ನೇ ಹುಟ್ಟು ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಬರುತ್ತಾರೆ. ಬಿಜೆಪಿಯವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹೈಕಮಾಂಡ್ ಮನವೊಲಿಸಲು ಸಿದ್ದರಾಮೋತ್ಸವ ಆಚರಿಸಿ‌ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ಯಾವುದೇ ಜಾತಿ, ಪಕ್ಷಕ್ಕೆ ‌ಸಮಿತವಾಗಿಲ್ಲ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಸಾಕಷ್ಟು ‌ಕೊಡುಗೆಯನ್ನು ನೀಡಿದ್ದಾರೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರ ಧ್ವನಿ ಎತ್ತುತ್ತ ನಾಲ್ಕು ದಶಕ ರಾಜಕೀಯ ಜೀವನ ಕಳೆದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75ನೇ ಜನ್ಮದಿನ ಈ ಭಾರಿ ಅಭಿಮಾನಿಗಳಿಂದ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.

ಯಾವುದೇ ರಾಜಕೀಯ ಪಕ್ಷ , ಜಾತಿ-ಧರ್ಮ, ವರ್ಗ ನಂಬಿಕೆಗಳಿಗೆ ಸೀಮಿತವಾಗದೇ ಅದರ ಆಚೆ ಈ ಬೃಹತ್ ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಸಮಿತಿಯ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ನಡೆಯಲಿದೆ.

ವಿರೋಧ ಪಕ್ಷಗಳ ಹೀಯಾಳಿಕೆಯಂತೆ ಇದು ಏಕವ್ಯಕ್ತಿ ಪ್ರತಿಷ್ಠೆಯ ಇಲ್ಲವೇ ಏಕವ್ಯಕ್ತಿ ವೈಭವೀಕರಣ ಮಾಡುವ ಮಹೋತ್ಸವವಲ್ಲ. ಇದು ಬಡವರು, ದೀನರು- ದಲಿತರು, ಅಲ್ಪಸಂಖ್ಯಾತರು, ಸಮಾಜದ ಕಟ್ಟಕಡೆಯ ಜನತೆ ಅಭಿಮಾನದಿಂದ ತಮ್ಮ ಖರ್ಚಿನಲ್ಲಿ ಆಯೋಜಿಸಿದ ಕಾರ್ಯಕ್ರಮವಾಗಿದೆ ಎಂದರು.

ಜಾರ್ಜ್ ಫರ್ನಾಂಡಿಸ್, ಡಾ. ರಾಮಮನೋಹರ ಲೋಹಿಯಾ ತತ್ವ ಸಿದ್ಧಾಂತದ ಅಡಿ ಸಿದ್ದರಾಮಯ್ಯ ಅವರು ಕೆಳಹಂತದ ಜನರ ಬಗ್ಗೆ ಚಿಂತನೆ ನಡೆಸುತ್ತ ಬಂದಿದ್ದು ಬಡವರಿಗಾಗಿಯೇ ಅವರು ರಾಜಕೀಯ ಮೀಸಲಾತಿ, ಅನ್ನಭಾಗ್ಯ, ಕೃಷಿ ಭಾಗ್ಯ, ಉದ್ಯೋಗ ಮೀಸಲಾತಿ, ಫ್ಯಾಸಿಸ್ಟ್, ಕೋಮುವಾದಿ, ಮತಿಯವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಸಿದ್ದರಾಮಯ್ಯ ಸಮಾಜವಾದಿ ತತ್ವದ ಮೇಲೆ ನಂಬಿಕೆ ಇಟ್ಟು ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯಾತೀತತೆ ಹಾಗೂ ಸಾಮಾಜಿಕ ಭಾತೃತ್ವ ಮೂಡಿಸಲುವಲ್ಲಿ ನಾಲ್ಕು ದಶಕ ರಾಜಕೀಯ ಮಾಡಿ ಸಮಾಜ ಸೇವೆ ಮಾಡಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅರ್ಥಶಾಸ್ತ್ರಜ್ಞ, ಗಡಿ ಸಲಹಾ ಸಮಿತಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಹತ್ತು ಹಲವು ಹೋರಾಟ ಅವರ ಭತ್ತಳಿಕೆಕೆಯಲ್ಲಿ ಸೇರಿವೆ ಎಂದರು.

ಬೆಳಗಾವಿ ಜಿಲ್ಲೆಯಿಂದ‌ ಕನಿಷ್ಠ 1 ಲಕ್ಷ ಜನ ದಾವಣಗೆರೆಗೆ ಆಗಮಿಸುವ ನಿರೀಕ್ಷೆ ಇದ್ದು ದಾವಣಗೆರೆಯಲ್ಲಿ 20ಲಕ್ಷ ಜನ ಸೇರಲಿದ್ದಾರೆ ಎಂದರು.

ನಿವೃತ್ತ ಎಸ್ಪಿ ಅಶೋಕ ಸದಲಗೆ, ಸುರೇಶ ಮಗದುಮ, ಇಮಾಮಹುಸೇನ ಕುನ್ನೂರ, ಪ್ರಕಾಶ ಅರಳಿ, ವಿಠ್ಠಲ ಖಾನಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ED ಅಧಿಕಾರಿಗಳಿಂದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button