
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಡೀ ಬದುಕನ್ನೇ ಶಿವಯೋಗಿಗಳ ಸ್ಥಳದಲ್ಲಿ ಕಳೆದು, ಸೇವೆ ಸಲ್ಲಿಸಿದ ಹಾಗೂ ವಿದ್ಯಾರ್ಥಿಗಳ ಮನದಲ್ಲಿ ಮನೆ ಮಾಡಿದ ಶಿಕ್ಷಕ ಪ್ರೊ. ಗೌಡರ ಅವರು, ಶಿಕ್ಷಣ ಸೇವೆ, ತ್ಯಾಗ ಜೀವಿ ಎಂದಾಗ ನೆನಪಾಗುವವರು, ಉತ್ತಮ ನಡೆ ನುಡಿ ಇಂದ ಉತ್ತಮ ಜೀವನ ನಡೆಸಿದವರು ಎಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಥಣಿಯ ಜಂಗಮಲಿಂಗ ಮೋಟಗಿ ಮಠದ ಸ್ವಾಮಿಗಳಾದ ಪ್ರಭು ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ನಗರದ ಗಂಗಾಧರ ಶಾನಬಾಗ ಸಭಾಗೃಹದಲ್ಲಿ ರವಿವಾರ ಅ.17 ರಂದು ಜರುಗಿದ ಸಿದ್ಧ ಪ್ರಬುದ್ಧ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ಧ ಪ್ರಬುದ್ಧ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಶಿಷ್ಯರನ್ನು ತನ್ನೆತ್ತರಕ್ಕೆ ಕರೆದುಕೊಂಡು ಹೋಗುವವರು ಮಾತ್ರ ಉತ್ತಮ ಹಾಗೂ ಶ್ರೇಷ್ಠರಲ್ಲಿ ಅತಿ ಶ್ರೇಷ್ಠ ಗುರು ಆಗುತ್ತಾನೆ. ಈ ಶಿಕ್ಷಕ ವೃತ್ತಿಯು ಬೇರೆ ಅಧಿಕಾರಗಳ ಹಾಗೆ ಅಲ್ಲ ಶಿಕ್ಷಕ ಹುದ್ದೆಯಲ್ಲಿದ್ದಾಗ ಯಾವ ಗೌರವ ದೊರಕುತ್ತದೆ ಯೊ ನಿವೃತ್ತಿಯ ನಂತರ ಕೂಡ ಅದೇ ಗೌರವವನ್ನು ನೀಡುವ ಒಂದು ಪವಿತ್ರ ಕೆಲಸವಾಗಿದೆ ಎಂದು ಹೇಳಿದರು.
ಯಾವ ವ್ಯಕ್ತಿ ತನ್ನಲ್ಲಿ ಪವಿತ್ರಾತ್ಮವನ್ನು ಹೊಂದಿರುತ್ತನೆ ಆ ವ್ಯಕ್ತಿ ಯಾವತ್ತೂ ತನ್ನ ಪ್ರಸಿದ್ಧತೆಯನ್ನು ಕಳೆದುಕೊಳ್ಳುವುದಿಲ್ಲ ಅಂತಹ ವ್ಯಕ್ತಿತ್ವ ಹೊಂದಿದ ವ್ಯೆಕ್ತಿ ಪ್ರೊ. ಎಎಸ್ ಎಂ ಗೌಡರ ಎಂದು ಹೇಳಿದರು.
ಇವರ ಬದುಕು ಪವಿತ್ರಾತ್ಮ ಹೊಂದಿದ ಬದುಕುಕು ಎಲ್ಲರಿಗಾಗಿ ಬದುಕಿರುವ ಬದುಕು ಎಂದು ಹೇಳಿದರು. ಅಭಿನಂದನಾ ಕಾರ್ಯಕ್ರಮ ಅತಿ ಪವಿತ್ರ ಕಾರ್ಯಕ್ರಮ ಇದು ಗೌಡರು ಮಾಡಿದ ಅವರ ಸೇವೆಯ ಪ್ರತಿಫಲ. ಗೌಡರ ಮಾರ್ಗದರ್ಶನ ಪಡೆದ ಅನೇಕ ಸಾಹಿತಿಗಳು ಈ ದಿನ ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದ ಹಿರೇಮಠ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಗೌಡರು ಸಿದ್ಧರು ಪ್ರಬುದ್ಧರು ಅವರ ಜ್ಞಾನ ಹಾಗೂ ಮಾರ್ಗದರ್ಶನದಿಂದ ಈ ದಿನ ಇಷ್ಟು ಶಿಷ್ಯರನ್ನು ಸಂಪಾದಿಸಿದ್ದಾರೆ ಎಂದು ಹೇಳಿದರು.
80ನೆಯ ಸಂವತ್ಸರದ ನಂತರ ನಮ್ಮ ಗುರುಗಳು ನಮ್ಮೆಲ್ಲರ ಕೇಂದ್ರ ಬಿಂದು ಆಗಿರುವುದು ಸಂತಸದ ವಿಷಯ. ಗುರುಗಳ ಅಭಿನಂದನಾ ಸಮಾರಂಭ ಮಾಡುತ್ತಿರುವದು ನಮ್ಮೆಲ್ಲರ ಭಾಗ್ಯ , ಬದುಕಿನುದ್ದಕ್ಕೂ ಯಾವುದೇ ಕಪ್ಪು ಚುಕ್ಕೆ ಇರದೆ ಉತ್ತಮ ಬದುಕನ್ನು ಬಾಳಿದವರು ಪ್ರೊ. ಎಸ್. ಎಂ ಗೌಡರು ಎಂದು ಹಾರೋಗೆರಿಯ ಚೆನ್ನ ವೃಷಬೆಂದ್ರಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ ಎಸ್ ಮಾಳಿ ಅಭಿನಂದನಾ ನುಡಿಗಳನ್ನು ಆಡಿದರು.
ಅನೇಕ ಗುರುಗಳನ್ನು ನೋಡಿದ್ದೆ ಆದರೆ ತಾಯಿ ವಾತ್ಸಲ್ಯ ನೀಡಿದ ಗುರುಗಳು ಇವರು ಎಂದು ಹೇಳಿದರು. ಗುರುಗಳಲ್ಲಿ ಅಪರೂಪದ ಗುರುಗಳು ಇವರು ಹಾಗೂ ನನ್ನ ಬದುಕಿನಲ್ಲಿ ತಿರುವು ಕೊಟ್ಟು ನನ್ನ ಈ ಸಾಧನೆಗೆ ಕಾರಣ ಪ್ರೊ. ಎಸ್ ಎಂ ಗೌಡರ ಗುರುಗಳು ಎಂದು ಹೇಳಿದರು.
ಅಭಿನಂದನಾ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಪ್ರೊ. ಎಸ್.ಎಂ.ಗೌಡರ ಅವರು 8 ದಶಕಗಳ ಕಾಲ ಸ್ಮರಿಸಿ ಎಲ್ಲರೂ ಮೆಚ್ಚುಗೆ ಹೊಗಳಿಕೆಯ ಮಾತಗಳನ್ನು ಆಡಿದ್ದಿರಿ ನಿಮಗೆ ಧನ್ಯವಾದಗಳು. ನಾವು ಮಾಡಿದ ಕೆಲಸ ಯೋಗ್ಯವಾಗಿ ದ್ದರೆ ಮಾತ್ರ ನಾವು ಮೆಚ್ಚುಗೆಗೆ ಅರ್ಹರರು ಎಂದು ಹೇಳಿದರು.
ಮೆಚ್ಚುಗೆ ಹೊಗಳಿಕೆಗೆ ವೆತ್ಯಾಸವದೆ ಆ ವೆತ್ಯಾಸ ತಿಳಿಯಲು ನಮ್ಮಲ್ಲಿ ವಿಮರ್ಶಾ ಪ್ರಜ್ಞೆ ಅತಿ ಅವಶ್ಯಕ ಎಂದು ಹೇಳಿದರು. ಪ್ರೊ. ಶ್ರೀಮತಿ ಅಪೂರ್ವ ಕರಿಕಟ್ಟಿ ಪ್ರಾರ್ಥಿಸಿದರು.
ಸ್ವಾಗತ ಮತ್ತು ಅತಿಥಿಗಳ ಪರಿಚಯವನ್ನು ಪ್ರೊ. ಶಶಿಕಾಂತ ತಾರದಾಳೆ ಮಾಡಿದರು, ಪ್ರೊ. ಡಾ. ಅಶೋಕ ನರೋಡೆ ಪ್ರಾಸ್ತಾವಿಕ ನುಡಿಗನ್ನಾಡಿದರು ಹಾಗೂ ಪ್ರೊ. ಎಸ್. ಬೀ ಬಣ್ಣಿಮಟ್ಟಿ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಎಸ್. ಎಂ ಗೌಡರ ದಂಪತಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿಯ ಕೆ. ಎಲ್. ಇ ಸಂಸ್ಥೆಯ ಲಿಂಗರಾಜ್ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಪ್ರೊ. ಎಂ. ಎಸ್. ಇಂಚಲ ಪ್ರೊ. ಎಸ್. ಎಂ ಗೌಡರ ಅವರ ಪರಿವಾರದವರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮರಗಾಯಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ