ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಜಗತ್ತು ಬದಲಾಗುತ್ತಿದೆ. ನಾವೂ ಸಹ ಬದಲಾಗೋಣ, ಆದರೆ ನಮ್ಮ ಧರ್ಮ ಮತ್ತು ಸಂಸ್ಕಾರ ಉಳಿಸಿ ಬೆಳೆಸುತ್ತ ಬದಲಾಗೋಣ. ಇಂದಿನ ಆಧುನಿಕ ತಂತ್ರಜ್ಞಾನದ, ಕಂಪ್ಯೂಟರ್ ಯುಗದಲ್ಲಿ ತಿಂಡಿ. ತಿನಿಸು, ಊಟದಲ್ಲಿ ಬದಲಾವಣೆ, ವಾಯುಮಾಲಿನ್ಯ, ಮೊದಲಾದ ಅನೇಕ ಕಾರಣಗಳಿಂದ ನೈಸರ್ಗಿಕ ಹೆರಿಗೆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಕಳವಳ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕನೇರಿಯ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಭಾನುವಾರ ‘ಸಿದ್ಧಗಿರಿ ಜನನಿ ಐವಿಎಫ್ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು. ‘ಮಕ್ಕಳಾಗದಿದ್ದಲ್ಲಿ ಮಹಿಳೆ ಬದುಕು ದುಸ್ಥರವಾಗುತ್ತದೆ. ಇಂತಹವರಲ್ಲಿ ಕೆಲವರು ಮಾತ್ರ ಟೆಸ್ಟ್ಟ್ಯೂಬ್ ಬೇಬಿ ಅಥವಾ ಐವಿಎಫ್ ಕೇಂದ್ರದಲ್ಲಿ ಸುಮಾರು ರೂ.2.50 ಲಕ್ಷದಿಂದ ರೂ.3 ಲಕ್ಷದವರೆಗೆ ವೆಚ್ಚ ಮಾಡಿ ಕೃತಕ ಗರ್ಭ ಧರಿಸುತ್ತಾರೆ. ಆದರೆ ಬಡವರಿಗೆ ಇದು ಅಸಾಧ್ಯ. ಬಗ್ಗೆ ನಮ್ಮ ಮುಂದೆ ಬಡವರು ಬಂದು ತಮ್ಮ ಅಳಲು ತೋಡಿಕೊಂಡಾಗ ಇಲ್ಲಿ ಸ್ಥಾಪಿಸಲು ನಾವು ನಿರ್ಧರಿಸಿದೇವು. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಇಲ್ಲಿನ ವೈದ್ಯರ ಸೇವಾಮನೋಭಾವದಿಂದ, ಪಾರದರ್ಶಕದಿಂದ ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಈ ಐವಿಎಫ್ ಕೇಂದ್ರದಲ್ಲಿ ಹೋಮಿಯೋಪಥಿ, ಅಲೋಪಥಿ ಮತ್ತು ಆಯುರ್ವೇದಿಕ ಈ ಮೂರು ವಿಭಾಗದಡಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಇದು ವಿಶ್ವದಲ್ಲಿಯೇ ಪ್ರಥಮ ಬಾರಿಯಾಗಿದೆ. ಗರ್ಭಸಂಸ್ಕಾರ ಸಹ ಇಲ್ಲಿ ನೀಡಲಾಗುವುದು. ಬಡವರಿಗೆ ಇಲ್ಲಿ ರೂ.5 ಸಾವಿರದಿಂದ ರೂ.70 ಸಾವಿರ ಮಾತ್ರ ವೆಚ್ಚ ಬರಲಿದೆ’ ಎಂದರು.
ಸಿದ್ಧಗಿರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ ‘ಸಿದ್ಧಗಿರಿ ಜನನಿ ಐವಿಎಫ್ ಕೇಂದ್ರ ಸ್ಫಾಪನೆಗೆ ಜೊಲ್ಲೆ ದಂಪತಿಗಳೇ ರೂವಾರಿಗಳು. ಜನಸೇವೆಯಲ್ಲಿ ಮುಂಚೂಣಿಯಲ್ಲಿರುವ ಜೊಲ್ಲೆ ದಂಪತಿ ಈಗ ಬಂಜೆತನದಿಂದ ಬಳಲುತ್ತಿರುವ ಬಡದಂಪತಿಗಳ ಆಶೆಯ ಕಿರಣವಾಗಿ ಪರಿಣಮಿಸಿದ್ದಾರೆ. ಬಡಮಹಿಳೆಯರು ಇನ್ನುಮುಂದೆ ಕೈಗೆಟಕುವ ವೆಚ್ಚದಲ್ಲಿ ಕೃತಕ ಗರ್ಭಧಾರಣೆಯಿಂದ ತಾಯ್ತತನದ ಅನುಭವ ಪಡೆಯಲಿದ್ದಾರೆ’ ಎಂದರು.
ಬೆಳಗಾವಿ ಜಿಲ್ಲೆಯ ಲೋಕಾಯುಕ್ತ ಇಲಾಖೆಯ ಎಸ್‌ಪಿ ಯಶೋದಾ ವಂಟಗೋಡಿ ಮಾತನಾಡಿ ‘ಪವಿತ್ರವಾದ ಸ್ಥಳಗಳಲ್ಲಿ ಯಾವುದೇ ಕಾರ್ಯ ಮಾಡಿದಲ್ಲಿ ಅದು ಯಶಶ್ವಿಗೊಳ್ಳುತ್ತವೆ. ಈ ಕೇಂದ್ರ ಯಶಸ್ವಿಯಾಗಿ ಈ ಭಾಗ ಸೇರಿದಂತೆ ಉಭಯ ರಾಜ್ಯಗಳ ಬಡದಂಪತಿಗಳಿಗೆ ಸಂತಾನಭಾಗ್ಯ ಒದಗಿಸಲಿ’ ಎಂದು ಹಾರೈಸಿದರು.
ಮರಾಠಿ ಚಲನಚಿತ್ರ ನಾಯಕಿ ದೀಪಾಲಿ ಸಯ್ಯದ ಮಾತನಾಡಿದರು. ಜನನಿ ಐವಿಎಫ್ ಕೇಂದ್ರದ ಮುಖ್ಯ ನಿರ್ದೇಶಕಿ ಡಾ. ವರ್ಷಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
*ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಏನಂದ್ರು ಲಕ್ಷ್ಮಣ ಸವದಿ?*
https://pragati.taskdun.com/athanibjp-candidatelakshmana-savadireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ