Latest

ಕೊರಳಿಗೆ ಗುರುತಿನ ಚೀಟಿ, ಟೆಬಲ್ ಮೇಲೆ ನಾಮಫಲಕ ಕಡ್ಡಾಯ

ಸರಕಾರಿ ಸಿಬ್ಬಂದಿಗೆ ಮಹತ್ವದ ಕಡ್ಡಾಯ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ತಮ್ಮ ಕೆಲಗಳಿಗಾಗಿ ಬಂದ ಸಂದರ್ಭದಲ್ಲಿ ಯಾವ ಅಧಿಕಾರಿ, ಯಾವ ಹುದ್ದೆ ನಿರ್ವಹಿಸುತ್ತಾರೆ? ಯಾರನ್ನು ಭೇಟಿ ಮಾಡಬೇಕು ಎನ್ನುವ ಮಾಹಿತಿ ಲಭ್ಯವಾಗದೆ ಗೊಂದಲದಲ್ಲಿ ಸಿಲುಕುತ್ತಾರೆ.

ಹಾಗಾಗಿ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ನೂತನ ಆದೇಶ ಹೊರಡಿಸಲಾಗಿದೆ.

ಸರಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಮ್ಮ ಕೊರಳಲ್ಲಿ ಗುರುತಿನ ಚೀಟಿ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರ ಜೊತೆಗೆ ತಾವು ಕುಳಿತುಕೊಳ್ಳುವ ಮೇಜಿನ ಮೇಲೆ ತಮ್ಮ ಹೆಸರು ಮತ್ತು ಹುದ್ದೆಯ ವಿವರಗಳನ್ನೊಳಗೊಂಡ ನಾಮಫಲಕವನ್ನು ಕಡ್ಡಾಯವಾಗಿ ಇಡಬೇಕು ಎಂದು ಆದೇಶಿಸಲಾಗಿದೆ.

Home add -Advt

ಎಲ್ಲಾ ಸಿಬ್ಬಂದಿಗಳೂ ಈ ಆದೇಶವನ್ನು ಪಾಲಿಸುವಂತೆ ನೋಡಿಕೊಳ್ಳುವಂತೆ ಮೇಲಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

 

Related Articles

Back to top button