ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಜಿಐಟಿ ಒಡಂಬಡಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ, ಸ್ಟೆಪ್ಸ್ ನಾಲೆಡ್ಜ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಕೆಎಲ್‌ಎಸ್ ಜಿಐಟಿಯ ಒಡಂಬಡಿಕೆ ಇದೇ ಮೇ 21 ರಂದು, ಸ್ಟೆಪ್ಸ್ ನಾಲೆಡ್ಜ್ ಸೆಂಟರ್ ಪ್ರೈವೇಟ್ ಲಿಮಿಟೆಡ್ , ಕೊಯಿಮತ್ತೂರ್ ಇವರ ಸಹಯೋಗದೊಂದಿಗೆ ಎಂಬೆಡೆಡ್ ಸಿಸ್ಟಮ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ವೈರ್‌ಲೆಸ್ ಸೆನ್ಸರ್ ನೆಟ್‌ವರ್ಕ್, ರೊಬೊಟಿಕ್ಸ್, ಮತ್ತು ಕೃತಕ ಬುದ್ಧಿಮತ್ತೆ ಪ್ರಾಯೋಗಿಕವಾಗಿ ಕಲಿಯಲು ಅನುಕೂಲವಾಗುವಂತೆ “ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್” ಅನ್ನು ಸ್ಥಾಪಿಸಲು ಬೆಳಗಾವಿಯ ಕೆಎಲ್ಎಸ್ ಜಿಐಟಿ ಒಡಂಬಡಿಕೆಗೆ ಸಹಿ ಹಾಕಿದೆ.
ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಒದಗಿಸುವ ಸುಧಾರಿತ ಹಾರ್ಡ್‌ವೇರ್ ಪ್ಲಾಟ್‌ಫಾರ್ಮ್‌ಗಳು, ಡೆವಲಪ್‌ಮೆಂಟ್ ಕಿಟ್‌ಗಳು, ಸೆನ್ಸರ್‌ಗಳು, ಆಕ್ಯೂವೇಟರ್‌ಗಳು ಮತ್ತು ರೋಬೋಟಿಕ್ ಸಿಸ್ಟಮ್‌ಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ನೊಂದಿಗೆ ಸಜ್ಜುಗೊಳಿಸಲಾಗುವುದು ಎಂದು ಗವರ್ನಿಂಗ್ ಕೌನ್ಸಿಲ್ ನ ಚೆರ್ಮನ್ ರಾಜೇಂದ್ರ ಬೆಳಗಾಂವ್ಕರ್ ಅವರು ತಿಳಿಸಿದರು.
ಈ ಮೂಲಸೌಕರ್ಯವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಂಬೆಡೆಡ್ ಸಿಸ್ಟಮ್ಸ್, ರೊಬೊಟಿಕ್ಸ್, ಐಒಟಿ ಮತ್ತು ಮೆಷಿನ್ ಲರ್ನಿಂಗ್ ಅಪ್ಲಿಕೇಶನ್‌ಗಳಲ್ಲಿ ಕಲಿಕೆ ಮತ್ತು ಪ್ರಯೋಗದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್, ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ನಾವೀನ್ಯತೆ, ಶಿಕ್ಷಣ ಮತ್ತು ಸಂಶೋಧನೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸ್ಟೆಪ್ಸ್ ನಾಲೆಡ್ಜ್ ಸೆಂಟರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ವಿ.ಎಸ್. ರಮೇಶ್ ಅನಿಸಿಕೆ ವ್ಯಕ್ತಪಡಿಸಿದರು.
ಒಡಂಬಡಿಕೆ ಸಹಿ ಸಮಾರಂಭಕ್ಕೆ ಕೆಎಲ್‌ಎಸ್ ಮ್ಯಾನೇಜ್‌ಮೆಂಟ್ ಸದಸ್ಯರಾದ ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರಾದ ಡಾ. ಎಂ.ಎಸ್. ಪಾಟೀಲ್, ಪ್ರೊ . ಡಿ . ಎ ಕುಲಕರ್ಣಿ , ಡೀನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಸುಪ್ರಿಯಾ ಶಾನಭಾಗ, ಡಾ ಉತ್ತಮ ದೇಶಪಾಂಡೆ, ಸಂಯೋಜಕರು ಈ ಸಂಧರ್ಭ ದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ